ಇಬ್ಬರ ಬಂಧನ : 10 ಮೋಟಾರ್ ಬೈಕ್‌ಗಳ ವಶ

ದಾವಣಗೆರೆ, ಜು.5- ಇಬ್ಬರು ಮೋಟಾರ್ ಬೈಕ್ ಕಳ್ಳರನ್ನು ಬಂಧಿಸಿರುವ ಇಲ್ಲಿನ ಬಡಾವಣೆ ಠಾಣಾ ಪೊಲೀಸರು 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ದೇವರಾಜ ಅರಸು ಬಡಾವಣೆಯ ನವೀದ್, ಮುಸ್ತಾಫ ನಗರದ ತರಗಾರ ಕೆಲಸಗಾರ ಸೈಯದ್ ಅಷ್ಫಕ್ ಬಂಧಿತರು.  ಕಳೆದ ಕೆಲವು ತಿಂಗಳಿನಿಂದ ನಗರದ ವಿವಿಧ ಶೋ ರೂಂ, ಅಂಗಡಿಗಳ ಮುಂದೆ, ದೇವರಬೆಳಕೆರೆ ಕೆರೆ ಬಳಿ, ರಾಣೇಬೆ ನ್ನೂರಿನಲ್ಲಿ ಒಟ್ಟು 10 ಬೈಕ್ ಗಳನ್ನು ಕಳ್ಳತನ ಮಾಡಿರು ವುದಾಗಿ ಬಂಧಿತರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ‌. 

ಕಾರ್ಯಾಚರಣೆಯಲ್ಲಿ ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಬಡಾವಣೆ ಠಾಣೆ ಪೊಲೀಸ್ ನಿರೀಕ್ಷಕ ಸುರೇಶ ಸಗರಿ, ಪಿಎಸ್ಐಗಳಾದ ಬಿ.ಎಸ್. ಅರವಿಂದ, ಎಸ್.ಬಿ. ಚಿದಾನಂದಪ್ಪ, ಸಿಬ್ಬಂದಿಗಳಾದ ಹರೀಶ್ ರೆಡ್ಡಿ, ಸಿದ್ದೇಶ್, ಅರುಣ ಕುಮಾರ್, ಕೆ.ಬಿ. ಹರೀಶ್, ಸೈಯದ್ ಅಲಿ, ವಿಶಾಲಾಕ್ಷಿ, ಅರ್ಜುನ ರಾಯಲ್, ಕುಬೇಂದ್ರಪ್ಪ ಇದ್ದರು.