ವಿನೋಬನಗರದಲ್ಲಿ ಎಲ್ಲೆಂದರಲ್ಲಿ ಕಸ, ಹಂದಿಗಳ ಹಾವಳಿ

ವಿನೋಬನಗರದಲ್ಲಿ ಎಲ್ಲೆಂದರಲ್ಲಿ ಕಸ, ಹಂದಿಗಳ ಹಾವಳಿ

ಮಾನ್ಯರೇ,

ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿಗಷ್ಟೇ ಆಗಿದೆ ? ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿನೋಬನಗರದ 1ನೇ ಮೇನ್, 11ನೇ ಕ್ರಾಸ್‌ನಲ್ಲಿ ನಾಗರಿಕರು ಎಲ್ಲೆಂದರಲ್ಲಿ ಕಸದ ರಾಶಿಯನ್ನು ತಂದು ರಸ್ತೆ ಹಾಗೂ ಚರಂಡಿಯಲ್ಲಿ ಹಾಕುತ್ತಾರೆ. ಇದರಿಂದ ಹಂದಿಗಳ ಹಾವಳಿಯೂ ಸಹ ಹೆಚ್ಚಾಗಿದೆ. ಇದರ ಬಗ್ಗೆ ಸಂಬಂಧಪಟ್ಟರು ಸೂಕ್ತವನ್ನು ಕ್ರಮವನ್ನು ತೆಗೆದುಕೊಳ್ಳುವಂತೆ ನಾಗರಿಕರು ವಿನಂತಿಸಿದ್ದಾರೆ.


– ನೊಂದ ನಾಗರಿಕರು.