ದಾವಣಗೆರೆ ಎಸ್ಪಿಯಾಗಿ ರಿಷ್ಯಂತ್

ದಾವಣಗೆರೆ, ಜೂ.9- ರಾಜ್ಯ ಸರ್ಕಾರವು 12 ಐಪಿಎಸ್ ಅಧಿ ಕಾರಿಗಳನ್ನು  ಇಂದು ವರ್ಗಾವರ್ಗಿ ಮಾಡಿದ್ದು, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಸಿ.ಬಿ. ರಿಷ್ಯಂತ್ ಅವರನ್ನು ನೇಮಕ ಮಾಡಿ, ಆದೇಶಿಸಿದೆ. 

ರಿಷ್ಯಂತ್ ಅವರು ಈ ಮೊದಲು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಿದ್ದರು. 

2013 ಬ್ಯಾಚ್ ಕರ್ನಾಟಕ ಕೆಡರ್‌ ಐಪಿಎಸ್ ಅಧಿಕಾರಿಯಾಗಿ ರುವ ರಿಷ್ಯಂತ್, ಮೂಲತಃ ಬೆಂಗಳೂರಿನವರಾಗಿದ್ದಾರೆ. ಮಂಗ ಳೂರಿನಲ್ಲಿ ಎಎಸ್ ಪಿ, ಬಾಗಲಕೋಟೆಯಲ್ಲಿ ಎಸ್ಪಿಯಾಗಿದ್ದ ಅವರು, ಮೈಸೂರಿನಲ್ಲಿ ಖಡಕ್ ಪೋಲಿಸ್ ಅಧಿಕಾರಿ ಎಂದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಿಷ್ಯಂತ್ ಅವರು ಶಾಸಕ ಮತ್ತು ಚಿತ್ರ ನಿರ್ಮಾಪಕ ಮುನಿರತ್ನ ಅವರ ಅಳಿಯ.

ಹಾವೇರಿ ಜಿಲ್ಲೆಗೆ ಹನುಮಂತರಾಯ: ದಾವಣಗೆರೆ ಜಿಲ್ಲಾ ಎಸ್ಪಿಯಾಗಿದ್ದ ಹನುಮಂತರಾಯ ಅವರನ್ನು ಹಾವೇರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.