ಬಸವಣ್ಣನವರ ಬದುಕು ತೆರೆದಿಟ್ಟ ಪುಸ್ತಕದಂತೆ

ಸಾಣೇಹಳ್ಳಿ ಮೇ 16- ಬಸವಣ್ಣ ನವರ ಬದುಕು ತೆರೆದಿಟ್ಟ ಪುಸ್ತಕ. ಅವರ ಬದುಕಿನ ಸಾರ ಸರ್ವಸ್ವ ವಚನಗಳು. ಅವುಗಳ ಅಧ್ಯಯನ, ಅನುಷ್ಠಾನಕ್ಕಿಂತ ಇಂದು ಅವರ ಮೂರ್ತಿಯನ್ನು ಪ್ರತಿಷ್ಠಾಪಿಸುವಲ್ಲಿ ಸ್ಪರ್ಧೆ ನಡೆದಿದೆ ಎಂದು ಸಾಣೇಹಳ್ಳಿಯ
ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಸಾಣೇಹಳ್ಳಿ ಶ್ರೀಮಠದಲ್ಲಿ ಗ್ಲೋಬಲ್ ಫೌಂಡೇಷನ್ ಅಂತರ್ಜಾಲದಲ್ಲಿ ಏರ್ಪಡಿಸಿದ್ದ `ವಿಶ್ವ ಬಸವ ಜಯಂತಿ’ ಮತ್ತು ಬಸವ ಸೆಂಟರ್ ಆಫ್ ನಾರ್ಥ್ ಅಮೇರಿಕಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

`ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದ ಬಸವಣ್ಣನವರ ವಿಚಾರಗಳನ್ನೇ ಸ್ಥಾವರಗೊಳಿಸಿ, ಅವರ ಮೂರ್ತಿ ಯಲ್ಲಿ ಜಂಗಮಗೊಳಿಸಿದ ಕಾರ್ಯ ನಡೆಯುತ್ತಿದೆ. ಇದು ಅವರಿಗೆ ಬಗೆಯುವ ದ್ರೋಹ ಎಂದರು.

ಇವತ್ತು ಕರ್ನಾಟಕ ದವರಿಗೆ ಮಾತ್ರವಲ್ಲ, ವಿದೇಶಿಗರಿಗೂ ಬಸ ವಣ್ಣ ನವರ ಮೂರ್ತಿ ಪ್ರತಿಷ್ಠಾ ಪನೆಯ ಹುಚ್ಚು ಹಿಡಿದಿ ದೆ. ಇದರ ಬದಲು ಅವರ ವಚನಗಳನ್ನು ನಮ್ಮ ಪೀಳಿಗೆಗೆ ಹೇಳಿಕೊಡುವ ವಚನಗಳಂತೆ ಬದುಕು ಕಟ್ಟಿಕೊಳ್ಳುವ ಕಾಯಕ ವನ್ನು ತುರ್ತಾಗಿ ಮಾಡಬೇಕಾಗಿದೆ ಎಂದು ಹಿತನುಡಿದರು.

ಇಂದು ವಚನ ಸಾಹಿತ್ಯದ ಅಧ್ಯಯನ ಕ್ಕೇನೂ ಕೊರತೆ ಇಲ್ಲ. ಆಳವಾದ ಅಧ್ಯಯನ ಮಾಡಿ ಎಲ್ಲರೂ ಮೆಚ್ಚುವಂತೆ ವಿಶ್ಲೇ ಷಣೆ, ಉಪನ್ಯಾಸ, ಪ್ರವಚನ ನಡೆದೇ ಇದೆ. ಆದರೆ, ಆ ಮಾತುಗಳಂತೆ ನಡೆದುಕೊಳ್ಳುವ ವರು ಎಷ್ಟು ಜನರಿದ್ದಾರೆ ? ಎಂದು ಪ್ರಶ್ನಿಸಿದರು.

ಬಸವಣ್ಣನವರು ಯಜ್ಞ-ಯಾಗಾದಿ ಗಳನ್ನು ಬಲವಾಗಿ ಖಂಡಿಸಿದರು. ಇಂದು ಕೆಲವು ಗೃಹಸ್ಥರಲ್ಲದೇ ರಾಜಕೀಯ, ಧಾರ್ಮಿಕ ಕ್ಷೇತ್ರದ ನೇತಾರರು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸುವುದೇ ಯಜ್ಞ-ಯಾಗಗಳಿಂದ ಮಾರ್ಗದರ್ಶಕರೇ ಮಾರ್ಗ ತಪ್ಪಿದಾಗ ಜನ ಸಾಮಾನ್ಯರ ಗತಿ ಏನು? ಎಂದು ಹೇಳಿದರು.

ವಿಶ್ವದ ವಿಭೂತಿ ಪುರುಷರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಬಸವಣ್ಣನವರದು. ಬಸವಣ್ಣ ಯಾವುದೇ ಮಠದ ಸ್ವಾಮಿಯಲ್ಲ. ಸನ್ಯಾಸಿ ಮೊದಲೇ ಅಲ್ಲ. ಅಪ್ಪಟ ಗೃಹಸ್ಥ. ಆದರೆ, ಮಠದ ಸ್ವಾಮಿಗಳಿಗಿಂತ ಶ್ರೇಷ್ಠ ಜೀವನ ನಡೆಸಿದವರು ಎಂದರು.

ಶರಣರು ದೇವರೇ ನನಗೆ ಅದನ್ನು ಕೊಡು, ಇದನ್ನು ಕೊಡು ಎಂದು ಬೇಡಿದವ ರಲ್ಲ. ಬದಲಾಗಿ ಕಾಯಕದಲ್ಲೇ ಕೈಲಾಸ ಕಂಡವರು. ಬಸವಣ್ಣ ಅತ್ಯಂತ ತಳವರ್ಗ ದವರಲ್ಲೂ ಆತ್ಮವಿಶ್ವಾಸ ಮೂಡಿಸಿದ್ದರು. ಹಾಗಾಗಿಯೇ ಆ ಜನರೆಲ್ಲ ಬಸವಣ್ಣನವರನ್ನೇ ದೇವರೆಂದು ಜಗದಣ್ಣ ಎಂದು ಗೌರವಿಸಿದ್ದು, ಇಂದು ಶರಣರು ತೋರಿದ ದಾರಿಯಲ್ಲಿ ನಡೆಯುವಂತಾದರೆ, ಮತ್ತೆ ಕಲ್ಯಾಣ ಸಾಕಾರಗೊಳ್ಳಲು ಸಾಧ್ಯ ಎಂದರು.

ಭಾರತೀಯ ಕಾಲಮಾನದ ಪ್ರಕಾರ ಮೇ 15ರ ಸಂಜೆ ಏಳು ಗಂಟೆಯಿಂದ ರಾತ್ರಿ 11ರ ತನಕ ನಡೆಯಿತು. ವಿವಿಧ ಸಂಘ-ಸಂಸ್ಥೆಗಳು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಯಡಿಯೂರಪ್ಪ ಸಂದೇಶ ರವಾನಿಸಿದ್ದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಬಿ.ವೈ.ವಿಜಯೇಂದ್ರ, ಶಿವಾನಂದ ಜಾಮದಾರ್, ಡಿ.ಐ.ಪ್ರಕಾಶ್, ಜಗದ್ಗುರು ಶ್ರೀ ಗಂಗಾ ಮಾತಾಜಿ, ಡಾ. ಶಿವಮೂರ್ತಿ ಮುರುಘಾ ಶರಣರು, ಅಕ್ಕ ಅನ್ನಪೂರ್ಣ, ಈಶ್ವರ ಮಂಟೂರು ಮಾತನಾಡಿದರು.

ಶ್ರೀಶೈಲ ಹಾದಿಮನಿ ಅಟ್ಲಾಂಟ ಕಾರ್ಯ ಕ್ರಮ ನಡೆಸಿಕೊಟ್ಟರು. ವಿಶ್ವದ ನಾನಾ ಭಾಗಗ ಳಿಂದ ಜನ ಅಂತರ್ಜಾಲದಲ್ಲಿ ವೀಕ್ಷಿಸಿದರು.