ಲಯನ್ಸ್‌ನಿಂದ ಆಹಾರದ ಕಿಟ್‌ ವಿತರಣೆ

ಲಯನ್ಸ್‌ನಿಂದ ಆಹಾರದ ಕಿಟ್‌ ವಿತರಣೆ

ದಾವಣಗೆರೆ, ಮೇ 9- ಲಯನ್ಸ್‌ ಕ್ಲಬ್‌ ಆಶ್ರಯದಲ್ಲಿ ಸಿ.ಜಿ. ಆಸ್ಪತ್ರೆ ಮತ್ತು ಚಾಮರಾಜಪೇಟೆಯ ಹೆರಿಗೆ ಆಸ್ಪತ್ರೆ ಮತ್ತು ಯುನಿಟಿ ಹೆಲ್ತ್‌ ಸೆಂಟರ್‌ನಲ್ಲಿ  6ನೇ ದಿನದ ಆಹಾರ ಪೊಟ್ಟಣ ಮತ್ತು ನೀರಿನ ಬಾಟಲ್‌ಗಳನ್ನು ಲಯನ್ಸ್‌ ಕ್ಲಬ್‌ ಉಪಾಧ್ಯಕ್ಷ ಎನ್‌.ಆರ್‌. ನಾಗಭೂಷಣ್‌ ರಾವ್‌ ನೇತೃತ್ವದಲ್ಲಿ ವಿತರಿಸಲಾಯಿತು. 

ಈ ಸೇವಾ ಕಾರ್ಯಕ್ರಮವನ್ನು ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್‌ ಅವರು ಉದ್ಘಾಟಿಸಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಎಸ್‌. ಓಂಕಾರಪ್ಪ ಅವರ ಅಧ್ಯಕ್ಷತೆ ವಹಿಸಿದ್ದರು. ದಾನಿ ಮಹಾಂತೇಶ್‌ ವಿ. ಒಣರೊಟ್ಟಿ, ನೀಲಿ ಉಮೇಶ್‌, ಗೋವಿಂದ್‌ರಾಜ್‌, ಕ್ಲಬ್‌ ಮ್ಯಾನೇಜರ್‌ ನಾಗರಾಜ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.