ಗೊಂದಲಕ್ಕೀಡಾಗಿರುವ ಮದುವೆ ಸಮಾರಂಭಗಳು

ಗೊಂದಲಕ್ಕೀಡಾಗಿರುವ ಮದುವೆ ಸಮಾರಂಭಗಳು

ಕೊರೊನಾ ಎರಡನೇ ಅಲೆಯ ಕುರಿತು ಅತಿಯಾದ ಭಯ ಸಾರ್ವಜನಿಕರಲ್ಲಿ ಹುಟ್ಟುತ್ತಿದೆ. ಕೊರೊನಾ ಬಂದು ಸಾಯುವವರಿಗಿಂತ ಕೊರೊನಾದಿಂದ ಭಯಪಟ್ಟು ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಜಗತ್ತಿನಲ್ಲಿ ಅತಿ ದೊಡ್ಡ ಕಾಯಿಲೆ ಅಂದರೆ `ಜೀವ ಭಯ’ದ ಕಾಯಿಲೆ. ಈ ಭಯದ ಕಾಯಿಲೆಗೆ ಯಾವ ಔಷಧ ಕೂಡ ಇಲ್ಲ. ಇದಕ್ಕೆ ಒಂದೇ ಪರಿಹಾರ, ಔಷಧಿ ಅಂದರೆ ಧೈರ್ಯ ತುಂಬುವ ಮತ್ತು ಭರವಸೆ ಮೂಡಿಸುವ ಕಾರ್ಯ ಕ್ರಮಗಳನ್ನು ಸರ್ಕಾರ ಮಾಡಬೇಕಾಗಿದೆ.

ಸರ್ಕಾರ ಈ ಕೊರೊನಾ ನಿಯಂತ್ರಣ ಮಾಡುವಲ್ಲಿ ಯಾವ ರೀತಿ ನಿಯಮ, ನಿರ್ಧಾ ರಗಳ ಕ್ರಮ ತೆಗೆದುಕೊಳ್ಳಬೇಕು ಎಂದು ಗೊಂದಲಕ್ಕೀಡಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಈ ಮದುವೆ ಸಮಾರಂಭಗಳಿಗೆ ಸರ್ಕಾರ ನೀಡಿರುವ ಮಾರ್ಗಸೂಚಿ ಮತ್ತು ದಿಢೀರ್‌ ನಿರ್ಧಾರ, ನಿರ್ಬಂಧಗಳು ಕಾರ್ಯರೂಪದ ಅಳವಡಿಕೆಯಲ್ಲಿ ಸಾರ್ವಜನಿಕರು ಗೊಂದಲ ಮತ್ತು ಕಷ್ಟಕ್ಕೀಡಾಗಿದ್ದಾರೆ. ಅವರ ಮದುವೆ ಮಾಡುವವರ ಕನಸುಗಳೆಲ್ಲಾ ನುಚ್ಚು ನೂರು ಆಗಿವೆ. ಆರ ರಿಂದ 8 ತಿಂಗಳು ಮುಂಚಿತವಾಗಿ ಸಂಬಂಧ ನೋಡಿ ಮುಹೂರ್ತ, ಛತ್ರ, ಅಡುಗೆ ಮಾಡುವವರು, ಅಲಂಕಾರ ಮಾಡುವವರು, ಫೋಟೊಗ್ರಾಫರ್‌ಗಳು, ವಾಲಗದವರು, ಶ್ಯಾಮಿಯಾನದವರು, ಲೈಟ್‌ನವರು ಹೀಗೆ ಅನೇಕರಿಗೆ ಮುಂಗಡ ಹಣ ಕೊಟ್ಟು ಕಚಿತಪಡಿಸಿರುತ್ತಾರೆ. ಬಂಗಾರ, ಬಟ್ಟೆಗಳನ್ನು ಖರೀದಿಸಿ, ಆಹ್ವಾನ ಪತ್ರಿಕೆಗಳನ್ನೂ ಸಹ ಹಂಚಿರುತ್ತಾರೆ. ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಾಲ ಮಾಡಿಯಾದರೂ ಸಹ ಮಕ್ಕಳ ಮದುವೆ ಮಾಡಬೇಕೆಂದು ಜೀವನ ಪರ್ಯಂತ ಕನಸು ಕಂಡಿರುತ್ತಾರೆ ಮತ್ತು ಈ ಮದುವೆ ಸಮಾರಂಭದ ಮೇಲೆ ಎಷ್ಟೊಂದು ವ್ಯಾಪಾರ ವಹಿವಾಟುಗಳು ಮತ್ತು ಕಾರ್ಮಿಕರು ಅವಲಂಬಿತರಾಗಿರುತ್ತಾರೆ.

ಇಂತಹವರಿಗೆ ಈ ಸರ್ಕಾರದ ದಿಢೀರ್‌ ನಿರ್ಧಾರಗಳನ್ನು ಕೇಳಿ ಅನೇಕರು ಹಣೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿಗೆ ತಂದಿದೆ ಮತ್ತು ಬೇರೆ ಊರುಗಳಿಂದ ಬರುವವರಿಗೆ ಪ್ರಯಾಣದ ಮತ್ತು ಮದುವೆಗೆ ಬರುವವರಿಗೆ ಈ ಕರ್ಫ್ಯೂ ಸಮಯದಲ್ಲಿ ಪ್ರಯಾಣಿಸಲು ಸ್ಪಷ್ಟ ಮಾಹಿತಿಗಳಿಲ್ಲದಂತೆ ಆಗಿದೆ. ಕೊರೊನಾ ಇರುವ ಸ್ಥಳಗಳಲ್ಲಿ (ಊರುಗಳಲ್ಲಿ) ಕೋವಿಡ್‌ ನಿಯಮದ ಕಠಿಣ ಕ್ರಮ ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ಅವಕಾಶ ಮಾಡಿಕೊಡಲಿ. ಪಕ್ಕದ ಊರಲ್ಲಿ ಮಳೆ ಆದ್ರೆ ಈ ಊರಲ್ಲಿ ಲುಂಗಿ ಎತ್ತಿಕೊಂಡು ನಡೆದಂಗೆ ಆಯ್ತು ಈ ನಿಯಮ ಮತ್ತು ನಿರ್ಬಂದಗಳು.

ಛತ್ರಗಳ ಅಳತೆ, ಛತ್ರಗಳಲ್ಲಿ ಇರುವ ವ್ಯವಸ್ಥೆಗಳ ಮೇಲೆ ಮದುವೆಗೆ ಬರುವ ಜನಗಳ ಸಂಖ್ಯೆಗಳನ್ನು ನಿರ್ಧರಿಸಲಿ. ಸಣ್ಣ ಛತ್ರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮದುವೆ ಮಾಡುವವರ ಮದುವೆಗೆ ಬರುವ ಜನರ ಸಂಖ್ಯೆಯೂ ಸಹ 50, ದೊಡ್ಡ ಛತ್ರಗಳಲ್ಲಿ ಮದುವೆ ಮಾಡುವ ವರಿಗೂ ಸಹ 50 ಜನ ಬರಲು ಕಾನೂನು ಮಾಡಿದರೆ ಇದು ಅವೈಜ್ಞಾನಿಕ ನಿರ್ಧಾರಗಳು. ಛತ್ರಗಳ ಅಳತೆಗೆ ಅನುಗುಣವಾಗಿ ಜನಗಳ ಸಂಖ್ಯೆ ನಿರ್ಧರಿಸಲಿ. ಕೊರೊನಾ ನಿಯಮಗ ಳನ್ನು ಅಳವಡಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು, ಆರು ಅಡಿ ಅಂತರದಲ್ಲಿ ಕುಳಿತುಕೊಂಡರೂ ಸಹ ದೊಡ್ಡ ಛತ್ರಗಳಲ್ಲಿ ಇನ್ನೂ ಸಾಕಷ್ಟು ಸ್ಥಳಾವಕಾಶ ಖಾಲಿ ಉಳಿದಿ ರುತ್ತದೆ. ಇಂತಹ ಸಂದರ್ಭಗಳಲ್ಲಿ ಎಲ್ಲರಿಗೂ ಒಂದೇ ರೀತಿ ಕಾನೂನಿನ ನಿರ್ಬಂಧಗಳು, ನಿಯ ಮಗಳನ್ನು ಅಳವಡಿಸುವುದು ಯಾವ ನ್ಯಾಯ? 

ಇದು ಒಂದು ರೀತಿ ಸರ್ಕಾರದ ಅರ್ಥ ವಿಲ್ಲದ `ದಿಢೀರ್‌ ನಿರ್ಧಾರಗಳು’ ಸಾರ್ವಜನಿಕ ರಿಗೆ ಗೊಂದಲಕ್ಕೆ ಈಡು ಮಾಡಿವೆ. ಮದುವೆ ಮಾಡುವ ನಿರ್ಬಂದನೆಗಳನ್ನು ಸ್ವಲ್ಪ ಸಡಿಲ ಮಾಡಿ ಕೋವಿಡ್‌-19 ರ ಮಾರ್ಗಸೂಚಿಯಂತೆ ಕಠಿಣ ಕ್ರಮ ಅಳವಡಿಸಿ 200 ಜನಕ್ಕೆ ಮದುವೆ ಬರುವಂತೆ ಮದುವೆ ಮಾಡುವವರಿಗೆ ಸಹಕಾರ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮದುವೆ ಮಾಡುವವರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ.


ಹೆಚ್‌.ವಿ. ಮಂಜುನಾಥಸ್ವಾಮಿ
98448 82366

 

Leave a Reply

Your email address will not be published.