ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲೇಬೇಕು

ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲೇಬೇಕು

ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಉಕ್ತಿಯ ಪರಿಕಲ್ಪನೆಯೇ ಒಂದು ಅದ್ಭುತ.  ಹೀಗೆ ಜಗತ್ತನ್ನು ನಮ್ಮ ಕುಟುಂಬ ಎಂದು ಉಹಿಸಿ, ಜಗತ್ತಿನ ಎಲ್ಲಾ ಜನರು ನಮ್ಮ ಕುಟುಂಬದ ಸದಸ್ಯರು, ಸರ್ವಜನಾಂಗದವರು ಬಂಧುಗಳು ಎಂದಾಗ ಜಗತ್ತು ಶಾಂತಿಯಿಂದ ಸಾಗುತ್ತದೆ.  ಇಂತಹ ಉತ್ತಮವಾದ ತತ್ವಾದರ್ಶಗಳನ್ನು ನಮ್ಮ ಹಿರಿಯರು ಮೊದಲಿನಿಂದಲೂ ಜಗತ್ತಿಗೆ ಸಾರುತ್ತಾ ಬಂದಿದ್ದಾರೆ.  ವೇದ, ಪುರಾಣ ಮತ್ತು ರಾಜ, ಮಹಾರಾಜರ ಕಾಲದಿಂದಲೂ ವಿಶ್ವಶಾಂತಿಗಾಗಿ, ಜಗತ್ತಿನ ಒಳಿತಿಗಾಗಿ, ಪ್ರಪಂಚದ ಜನರ ಕಲ್ಯಾಣಕ್ಕಾಗಿ, ಆರೋಗ್ಯಕ್ಕಾಗಿ ಭಾರತ ತನ್ನನ್ನು ಅರ್ಪಿಸಿಕೊಂಡು ಬಂದಿದೆ.  ಅಲ್ಲದೆ ಜಗತ್ತಿನ ಯಾವುದೇ ಮೂಲೆಯಲ್ಲಿ ವಿಪತ್ತುಗಳು ಸಂಭವಿಸಿದರೆ, ಜಾಗತಿಕ ರೋಗ-ರುಜಿನಗಳು ಹರಡಿದರೆ ನಮ್ಮ ರಾಷ್ಟ್ರದ ಆಡಳಿತ ತ್ವರಿತಗತಿಯಲ್ಲಿ ವಿದೇಶಗಳಿಗೆ ನೆರವಾಗಿ ವಿಶ್ವ ಬಂಧುತ್ವವನ್ನು ಮೆರೆದಿದೆ. 

ಕಳೆದ ವರ್ಷ ಮಾನವ ಸಂಕುಲಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಕೋವಿಡ್-19. ಭಾರತ ಬೇರೆ ಯಾವುದೇ ದೇಶದ ಮೇಲೆ ಅವಲಂಭಿತವಾಗಿರಲಿಲ್ಲ, ಬದಲಾಗಿ ಅನೇಕ ದೇಶಗಳಿಗೆ ಸಹಾಯ ನೀಡಿರುತ್ತದೆ.  ಸುಮಾರು 150 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವೈದ್ಯಕೀಯ ಮತ್ತು ಇತರೆ ಸಹಾಯವನ್ನು ನೀಡಿರುತ್ತದೆ.  ಸುಮಾರು 70ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ-19 ವ್ಯಾಕ್ಸೀನನ್ನು ಒದಗಿಸಿರುತ್ತದೆ.  ಇದಕ್ಕಾಗಿ ನಮ್ಮ ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳು ಶ್ಲಾಘನೆ ಮಾಡಿರುತ್ತವೆ. 

ಕಳೆದ ಒಂದು ತಿಂಗಳಿಂದ ನಮ್ಮ ರಾಷ್ಟ್ರ ಕೋವಿಡ್‍ನ ಎರಡನೇ ಅಲೆಯಲ್ಲಿ ನಲುಗಿ ಹೋಗಿದೆ.  ಇದನ್ನು ಕಂಡಂತಹ ಅನೇಕ ರಾಷ್ಟ್ರಗಳು ಕಂಬನಿ ಮಿಡಿದಿವೆ.  ಭಾರತ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದನ್ನು ನೆನಪಿಸಿಕೊಂಡು ಸಹಾಯ ಹಸ್ತವನ್ನು ಚಾಚಿರುತ್ತವೆ.  ಅಮೇರಿಕದ ಅಧ್ಯಕ್ಷರಾದ ಜೋ ಬಿಡೆನ್‍ರವರು ಈ ರೀತಿ ನೆನಪಿಸಿಕೊಂಡಿರುತ್ತಾರೆ.  “Just as India sent assistance to the United States as our hospitals were strained early in the pandemic, we are determined to help india in its time of need. India was there for us and we will be there for them. 

ಅಕ್ಷರಶಃ ಇದು ಸತ್ಯ ನೆನಪಿಸಿಕೊಳ್ಳಿ `ನಾ ನೀನಗಿದ್ದರೆ ನೀ ನನಗೆ’ ಹೀಗೆ ಅನೇಕ ರಾಷ್ಟ್ರ ನಾಯಕರು ಕಳೆದ ವರ್ಷ ನಮ್ಮ ರಾಷ್ಟ್ರ ಮಾಡಿದ ಸಹಾಯವನ್ನು ನೆನಪಿಸಿಕೊಂಡು ಅತ್ಯುತ್ತಮ ಮಾತುಗಳನ್ನಾಡಿ, ಎಲ್ಲಾ ರೀತಿಯ ವೈದ್ಯಕೀಯ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಇದಕ್ಕೆ ಪಾಕಿಸ್ತಾನ, ಚೀನಾ ದೇಶಗಳು ಕೂಡ ಹೊರತಾಗಿಲ್ಲ.  ಎಂದರೆ, ನಮ್ಮ ರಾಷ್ಟ್ರ ವಿಶ್ವ ಬಂಧುವಾಗಿ ಜಗತ್ತಿಗೆ ಎಷ್ಟು ಸಹಾಯ ಮಾಡಿರಬಹುದು ಎಂದು ಉಹಿಸಿಕೊಳ್ಳಲು ಅಸಾಧ್ಯ.

ಅಮೇರಿಕದ ಅಧ್ಯಕ್ಷರಾದ ಜೋ-ಬಿಡೆನ್ ಅವರು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫೋನ್ ಮುಖಾಂತರ ಮಾತನಾಡಿ, ಆಕ್ಸಿಜನ್‌ಗೆ ಸಂಬಂಧ ಪಟ್ಟ ಎಲ್ಲಾ ಸಲಕರಣೆಗಳನ್ನು, ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ನೀಡಲು ಮುಂದಾಗಿದ್ದಾರೆ.  ಅಲ್ಲದೆ ಕೋವಿ ಶೀಲ್ಡ್‌ ಲಸಿಕೆ ತಯಾರಿಕೆಗೆ ಬೇಕಾದ ಕಚ್ಛಾ ವಸ್ತುಗಳ ಮೇಲಿನ ವ್ಯಾಪಾರ ನಿಷೇಧವನ್ನು ತೆಗೆದು ಹಾಕಿದ್ದಾರೆ ಮತ್ತು ಜೊತೆಯಾಗಿ ಕೋವಿಡ್ ವಿರುದ್ಧ ಹೋರಾಡುವ ಧೈರ್ಯವನ್ನು ನೀಡಿದ್ದಾರೆ.  100 ಮಿಲಿಯನ್ ಡಾಲರ್ ಮೌಲ್ಯದ ಕೋವಿಡ್-19 ಪರಿಹಾರ ಸಾಮಗ್ರಿಗಳನ್ನು ಭಾರತಕ್ಕೆ ತಲುಪಿಸಲಿದೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‍ಮಾರಿಸನ್ ರವರು ಭಾರತ, ಜಪಾನ್‌ ಮತ್ತು ಅಮೇರಿಕ ಜೊತೆಗೂಡಿ squad ರಚಿಸಿಕೊಂಡು ಕೋವಿಡ್‌ ವ್ಯಾಕ್ಸಿನ್ ನೀಡಲು ಮುಂದಾಗಿದ್ದಾರೆ.  ಚೀನಾ ವಿದೇಶಾಂಗ ಕಾರ್ಯಾಲಯ ಹೀಗೆ ಹೇಳಿದೆ Ready to provide support and help according to india’s need. ಜರ್ಮನ್ ದೇಶ ಈಗಾಗಲೇ 23 ಮೊಬೈಲ್ ಆಕ್ಸಿಜನ್ ಉತ್ಪಾದನಾ ಪ್ಲಾಂಟ್‍ಗಳನ್ನು ಕಳುಹಿಸಿಕೊಟ್ಟಿದೆ.  ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುಯಲ್ ಮಾರ್ಕಸ್ ಭಾರತಕ್ಕೆ ಎಲ್ಲಾ ಸಹಾಯವನ್ನು ಮಾಡುವುದಾಗಿ ತಿಳಿಸಿರುವುದಲ್ಲದೆ, 21 ಆಕ್ಸಿಜನ್ ಪ್ಲಾಂಟ್‍ಗಳನ್ನು ಕಳುಹಿಸಿದೆ. ಇಂಡೋನೇಷಿಯ 19 ಆಕ್ಸಿಜನ್ ಟ್ಯಾಂಕರ್‌ಗಳನ್ನು ಕಳುಹಿಸಿದೆ.  ರಷ್ಯಾ ದೇಶ 22 ಟನ್ ವೈದ್ಯಕೀಯ ಉಪಕರಣಗಳನ್ನು ಕಳುಹಿಸಿದೆ. ಯುನೈಟೆಡ್ ಕಿಂಗ್‌ಡಮ್ 140 ವೆಂಟಿಲೇಟರ್‍ಗಳನ್ನು, 120 ಆಕ್ಸಿಜನ್ ಕಾನ್ಸ್‌ಟ್ರೇಟರ್‍ಗಳನ್ನು ಮತ್ತು 495 ಆಕ್ಸಿಜನ್ ಜನರೇಟರ್‍ಗಳನ್ನು ಕಳುಹಿಸಿದೆ.  ಸಿಂಗಪುರ್ 4 ಕ್ರಯೋಜನಿಕ್ ಆಕ್ಸಿಜನ್ ಟ್ಯಾಂಕರ್‌ಗಳನ್ನು ಕಳುಹಿಸಿದೆ.  ಪಾಕಿಸ್ತಾನದ ಇಜು Foundation 50 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲು ಮುಂದಾಗಿರುತ್ತದೆ.  ಪಾಕಿಸ್ತಾನ ಸರ್ಕಾರ ವೈದ್ಯಕೀಯ ಉಪಕರಣಗಳನ್ನು ಕಳುಹಿಸುವುದರ ಜೊತೆಗೆ  as a gesture of solidarity with people of India in the wake of current wave of Covid-19, Pakistan has offered to provide relief support to India  ಎಂದು ಹೇಳಿದೆ.

ಹೀಗೆ ಅನೇಕ ರಾಷ್ಟ್ರಗಳು ನಮಗೆ ಸ್ಪಂದಿಸುತ್ತಿದ್ದು `ಭಾರತ ವಿಶ್ವಬಂಧು’ ಎನಿಸಿಕೊಂಡಿದೆ.  130 ಕೋಟಿ ಜನಸಂಖ್ಯೆ ಇರುವ ಭಾರತ ಜಾಗತಿಕ ರೋಗದ ಕೇಂದ್ರ ವಾಗುವುದು ಬೇಡ, ಹಾಗಾಗಿ ಶ್ರೀ ಬಾಬಾ ಸದ್ಗುರು ಅವರು ಹೇಳಿದ ಹಾಗೆ ಆಡಳಿತದವರನ್ನು ಮತ್ತು ಅಧಿಕಾರಿಗಳನ್ನು ಬೆಂಬಲಿಸಬೇಕಿದೆ. Strengthen the administration to over come this pandemic situation. 

– ಹೆಚ್.ಎನ್. ಶಿವಕುಮಾರ್
ommarket007@gmail.com