ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ

ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ

ಹರಪನಹಳ್ಳಿ, ಏ.24- ಕೋವಿಡ್ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡು ತ್ತಿದ್ದು, ಕಣ್ಣಿಗೆ ಕಾಣದ ಕಿಲ್ಲರ್ ಕೊರೊನಾವನ್ನು ತಡೆಗಟ್ಟಲು ಸರ್ಕಾರ ಸೆಮಿ ಲಾಕ್‌ಡೌನ್‌ ಮಾಡಿದ್ದು, ತಾಲ್ಲೂಕಿನ ಜನರು ಹಾಗೂ ವ್ಯಾಪಾರಸ್ಥರು ಪೊಲೀ ಸ್ ಅಧಿಕಾರಿಗಳ ಮಾತಿಗೆ ಸ್ಪಂದಿಸಿದ್ದಾರೆ.  ಬೆಳಗಿನಿಂದ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗ ಟ್ಟುಗಳಿಗೆ ಬೀಗ ಹಾಕಿದ್ದು, ಅಲ್ಲೊಂದು ಇಲ್ಲೊಂದು ವಾಹನಗಳು ರಸ್ತೆಗಳಿ ದಿರುವುದು ಬಿಟ್ಟರೆ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು.

 ಸರ್ಕಾರ ಕೊರೊನಾ ತಡೆಗಟ್ಟಲು ತೆಗೆದು ಕೊಳ್ಳುತ್ತಿರುವ ಪ್ರತಿಯೊಂದು ಕಟ್ಟುನಿಟ್ಟಿನ ಕ್ರಮಗಳಿಗೆ  ಜನರು ಸಹಕರಿಸುತ್ತಿದ್ದಾರೆ. ವಾರಾಂತ್ಯದ ಕರ್ಫ್ಯೂ ಬಗ್ಗೆ  ಕಳೆದೆರಡು ದಿನಗಳಿಂದ ಪೊಲೀಸ್‌ ಇಲಾಖೆ, ಪುರಸಭೆ ಹಾಗೂ ತಾಲ್ಲೂಕು ಆಡಳಿತ ಸಾಕಷ್ಟು ಜಾಗೃತಿ ಮೂಡಿಸಿದ್ದು, ಜನರು ಮನೆಯಲ್ಲಿಯೇ ಉಳಿಯುವಂತಾಗಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಗಳಿಗೆ ಪೊಲೀಸ್ ಅಧಿಕಾರಿ ಗಳು ಹಾಗೂ ಸಿಬ್ಬಂದಿಯವರು    ರಸ್ತೆಗೆ ಬ್ಯಾರಿಕೇಡ್ ಹಾಕಿ ಅನಾವಶ್ಯಕವಾಗಿ ಸಂಚರಿಸುವ ವಾಹನ ಸವಾರರಿಗೆ ಬುದ್ಧಿವಾದ ಹೇಳಿ ಕಳಿಸಿದ ಘಟನೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನಡೆದಿದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಗಳನ್ನು ನೋಡಿ, ಪಟ್ಟಣ ಪ್ರವೇಶಿಸದೆ ಮಧ್ಯದಲ್ಲೇ ವಾಪಸ್‌ ಹೋಗಿ  ಮನೆ ಸೇರಿದ ಘಟನೆಯು ನಡೆದಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಹಳ್ಳಿಯನ್ನು ಬಿಡದೇ ಬೇವಿನ ಮರದ ಕೆಳಗೆ ಕಾಲ ಕಳೆಯುತ್ತಿದ್ದಾರೆ. 

ಒಟ್ಟಾರೆ ತಾಲ್ಲೂಕಿನಲ್ಲಿ ನಡೆದ ವೀಕೆಂಡ್ ಕರ್ಫ್ಯೂಗೆ ತಾಲ್ಲೂಕಿನ ಜನ ಸ್ಪಂದಿಸಿದ್ದಾರೆ. ಜನತೆ ಸರ್ಕಾರದ ಆದೇಶವನ್ನು ಉಲ್ಲಂಘಿಸದೇ ಕಟ್ಟು ನಿಟ್ಟಾಗಿ ಪಾಲನೆ ಮಾಡಿರುವುದು ಕಂಡುಬಂದಿದೆ.