ವಾಮದೇವಪ್ಪನವರ ಗೆಲುವು ನಿಶ್ಚಿತ

ವಾಮದೇವಪ್ಪನವರ ಗೆಲುವು ನಿಶ್ಚಿತ

ಬಾ.ಮ. ಬಸವರಾಜಯ್ಯ

ಹರಿಹರ, ಏ.19- ಜಿಲ್ಲೆಯಲ್ಲಿ ಕನ್ನಡದ ಉಳಿವಿ ಗಾಗಿ ಮತ್ತು ಬೆಳವಣಿಗೆಯ ಪರವಾಗಿ ಅನೇಕ ವರ್ಷ ಗಳಿಂದ ಸೇವೆ ಮಾಡುತ್ತಾ ಬಂದಿರುವ ಬಿ. ವಾಮದೇವ ಪ್ಪನವರು ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದು ಹಿರಿಯ ಸಾಹಿತಿ ಬಾಮ ಬಸವರಾಜಯ್ಯ ಹೇಳಿದರು.

ಇಲ್ಲಿನ ವಿದ್ಯಾನಗರದ ಐರಣಿ ಹೊಳೆ ಶಾಖಾ ಮಠದ ಆವರಣದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 

ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಬೆಳೆಸುವುದರ ಬಗ್ಗೆ ಅಪಾರವಾದ ಶ್ರದ್ಧೆ, ಕಾಳಜಿ ಮತ್ತು ಬದ್ಧತೆಯನ್ನು ಹೊಂದಿರುವ ಹಾಗೂ ಕನ್ನಡ ಭಾಷೆ, ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವನ್ನು, ಸಾಹಿತಿಗಳ ಒಡನಾಟ, ಕನ್ನಡ ಪರ ಸಂಘಟನೆಗಳೊಂದಿಗೆ ಪ್ರೀತಿಯ ಸಂಬಂಧ ಇಟ್ಟುಕೊಂಡಿರುವುದರ ಜೊತೆಗೆ ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿರುವ ಬಿ. ವಾಮದೇವಪ್ಪ ಅವರು ಈ ಬಾರಿ ನಡೆಯುವ ಚುನಾವಣೆಯಲ್ಲಿ ಅಧಿಕ ಮತಗಳನ್ನು ಪಡೆದು ಜಯ ಗಳಿಸುತ್ತಾರೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ. ವಾಮದೇವಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗಿಲ್ಲ. ಮಾನವ ಜಾತಿ ಒಂದೇ ಎಂದು ಎಲ್ಲರನ್ನೂ ಒಗ್ಗೂಡಿಸಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಪರಿಷತ್ತು ಕೆಲಸ ಮಾಡಿಕೊಂಡು ಬಂದಿದೆ ಎಂದರು.

ಜಿಲ್ಲೆಯಲ್ಲಿ ನಾನು ಮುಖ್ಯ ಶಿಕ್ಷಕರಾಗಿ, ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಮಾಡುತ್ತಾ ಬಂದಿದ್ದು, ದಾವಣಗೆರೆ ನಗರದಲ್ಲಿ ಸುಮಾರು 87  ದತ್ತಿ ಕಾರ್ಯಕ್ರಮಗಳನ್ನು ಮಾಡಿದ್ದು, ಜೊತೆಗೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ಧತೆ ಕೂಡ ಮಾಡಲಾಯಿತು. ಆದರೆ ಅದು ಇನ್ನೂ ಕೈಗೂಡುವ ಹಂತದಲ್ಲಿ ಇದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ  ರೇವಣಸಿದ್ದಪ್ಪ ಅಂಗಡಿ, ಬೆಳ್ಳೂಡಿ ರಾಮಚಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಕ.ಸಾ.ಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಎಸ್.ಹೆಚ್. ಹೂಗಾರ, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಬೆಳ್ಳೂಡಿ ರಾಮಚಂದ್ರಪ್ಪ, ಬಿ. ರೇವಣಸಿದ್ದಪ್ಪ, ಹೆಚ್.ಕೆ. ಕೊಟ್ರಪ್ಪ, ಸಿ.ವಿ. ಪಾಟೀಲ್, ಭಿಕ್ಷಾವರ್ತಿ ಮಠ್, ಸಿ.ಎನ್. ಹುಲುಗೇಶ್, ಸುಬ್ರಮಣ್ಯ ನಾಡಿಗರ್, ಯೋಗೀಶ್ ಪಾಟೀಲ್, ಖಲೀಂಬಾಷಾ, ಡಿ.ಎಂ. ಮಂಜುನಾಥಯ್ಯ, ವಿ.ಬಿ. ಕೊಟ್ರೇಶ್,  ಬಿ.ಬಿ. ರೇವಣ್ಣನಾಯ್ಕ್, ರುದ್ರಗೌಡ, ಈಶಪ್ಪ ಬೂದಿಹಾಳ ಎನ್, ಇ. ಸುರೇಶ್, ಪತ್ರಕರ್ತರಾದ ಚಿದಾನಂದ ಕಂಚಿಕೇರಿ, ಸದಾನಂದ ಕುಂಬಳೂರು, ಮುನಿರಾಜ್, ಜಿಗಳಿ ಮಂಜುನಾಥ್, ಎಂ.ವಿ. ಹೊರಿಕೇರಿ, ಕುಂದೂರು ಮಂಜಪ್ಪ ಸಿರಿಗೆರೆ, ನಾಗರಾಜ್ ಬಿರ್ಲಾ ಇತರರಿದ್ದರು.