ಜಿಲ್ಲೆಯಲ್ಲಿ 199 ಜನರಿಗೆ ಸೋಂಕು

ದಾವಣಗೆರೆ, ಏ. 19- ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಲೇ ಇದ್ದು ಸೋಮವಾರ 199 ಪ್ರಕರಣಗಳು ವರದಿಯಾಗಿವೆ. 

ದಾವಣಗೆರೆ ತಾಲ್ಲೂಕಿನಲ್ಲಿ 131, ಹರಿಹರ ಹಾಗೂ ಜಗಳೂ ರಿನಲ್ಲಿ ತಲಾ  4,  ಚನ್ನಗಿರಿಯಲ್ಲಿ 34, ಹೊನ್ನಾಳಿಯಲ್ಲಿ 20 ಹಾಗೂ ಹೊರ ಜಿಲ್ಲೆಯ ಆರು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.‌  42 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. 

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 754ಕ್ಕೆ ಏರಿಕೆಯಾಗಿದೆ.