ಅಕ್ರಮ ಸಾಗಾಟ : 150 ಕ್ವಿಂಟಾಲ್‌ ಅಕ್ಕಿ ವಶ; ಇಂದು ಬಹಿರಂಗ ಹರಾಜು

ಅಕ್ರಮ ಸಾಗಾಟ : 150 ಕ್ವಿಂಟಾಲ್‌  ಅಕ್ಕಿ ವಶ; ಇಂದು ಬಹಿರಂಗ ಹರಾಜು

ಹರಿಹರ, ಏ.19- ಅಕ್ರಮವಾಗಿ ಸಾಗಿಸುತ್ತಿದ್ದ 150 ಕ್ವಿಂಟಾಲ್‌ ಅಕ್ಕಿಯನ್ನು ಆಹಾರ ಶಿರಸ್ತೇದಾರ್‌ ಹಾಗೂ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಅಕ್ರಮ ಅಕ್ಕಿಯನ್ನು ನಾಳೆ ದಿನಾಂಕ 20 ರಂದು ಬೆಳಿಗ್ಗೆ 11 ಗಂಟೆಗೆ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಷರತ್ತುಗಳಿಗೆ ಬದ್ಧರಾಗಿ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಆಹಾರ ಇಲಾಖೆ ಅಧಿಕಾರಿ ರಮೇಶ್‌ ತಿಳಿಸಿದ್ದಾರೆ.