ದೇವರಬೆಳಕೆರೆಯಲ್ಲಿ `ಆರೋಗ್ಯ ಕ್ಷೇಮ ದಿನ’ ಆಚರಣೆ

ದೇವರಬೆಳಕೆರೆಯಲ್ಲಿ `ಆರೋಗ್ಯ ಕ್ಷೇಮ ದಿನ’ ಆಚರಣೆ

ಮಲೇಬೆನ್ನೂರು, ಏ.15- ದೇವರಬೆಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕ್ಷೇಮ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 130ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಿಗುವ 12 ಪ್ರಾಥಮಿಕ ಆರೋಗ್ಯ ಸೇವೆಗಳ ಬಗ್ಗೆ ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ಮಾಹಿತಿ ನೀಡಿದರು. ವೈದ್ಯಾಧಿಕಾರಿಗ ಳಾದ ಡಾ. ವಿಶ್ವನಾಥ್‌ ಮತ್ತು ಡಾ. ದರ್ಶನ್‌ ಅವರು ಆರೋಗ್ಯ ಮತ್ತು ಕ್ಷೇಮ ದಿನ ಆಚರಣೆಯ ಉದ್ದೇಶಗಳನ್ನು ತಿಳಿಸಿ, ಆರೋಗ್ಯದ ಬಗ್ಗೆ ಎಲ್ಲರೂ ನಿಗಾವಹಿಸುವಂತೆ ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷೆ ಗೀತಮ್ಮ ಪರಸಪ್ಪ, ಉಪಾಧ್ಯಕ್ಷೆ ಮಹೇಶ್ವರಮ್ಮ ವಾಗೀಶ್‌, ಪಿಡಿಓ ಶಿವಪ್ಪ ಬಿರಾದಾರ್‌, ಆರೋಗ್ಯ ಮೇಲ್ವಿಚಾರಕಿ ಸುಧಾ ಸೇರಿದಂತೆ ಗ್ರಾ.ಪಂ. ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.