ದಮನಿತರಿಗಾಗಿ ಶ್ರಮಿಸಿದ ನಾಯಕ ಅಂಬೇಡ್ಕರ್

ದಮನಿತರಿಗಾಗಿ ಶ್ರಮಿಸಿದ ನಾಯಕ ಅಂಬೇಡ್ಕರ್

ಹರಪನಹಳ್ಳಿಯಲ್ಲಿ ಪುರಸಭೆ ಸದಸ್ಯ ಹೆಚ್.ಕೊಟ್ರೇಶ್

ಹರಪನಹಳ್ಳಿ, ಏ.15- ಸಮಾನತೆ, ಭ್ರಾತೃತ್ವ ಮನೋಭಾವನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯ ಹೆಚ್.ಕೊಟ್ರೇಶ್ ಹೇಳಿದರು.

ಪಟ್ಟಣದ 8ನೇ ವಾರ್ಡ್‌ನ ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ 130ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಶೋಷಿತರ   ಮತ್ತು ದಮನಿತರ  ಅಭಿವೃದ್ಧಿಗಾಗಿ ಶ್ರಮಿಸಿದ ಮಹಾ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಆದರ್ಶಗಳನ್ನು ನಾವು  ಮೈಗೂಡಿಸಿಕೊಳ್ಳಬೇಕು. 

ಪೋಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕು ಎಂದು ತಿಳಿಸಿದರು.

ಕಾಲೋನಿಯ ಯುವಕರು ಕಾಲೋನಿಯನ್ನು ತಳಿರು, ತೋರಣಗಳಿಂದ ಅಲಂಕರಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಹೆಚ್ ಮಾರುತಿ, ನೀಲೇಶ್, ಉಚ್ಚೆಂಗೆಪ್ಪ, ದೇವೇಂದ್ರ, ಮಂಜುನಾಥ್, ಉಪೇಂದ್ರ, ಹಾಲೇಶ್, ಸುರೇಶ್, ರಮೇಶ್, ದುರುಗೇಶ್, ಅಜ್ಜಯ್ಯ ಇನ್ನಿತರರಿದ್ದರು.