ಜಿಗಳಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ಜಿಗಳಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ಮಲೇಬೆನ್ನೂರು, ಏ.15- ಜಿಗಳಿ ಗ್ರಾಮದ ಗ್ರಾ.ಪಂ. ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 130 ನೇ ಜಯಂತಿ ಆಚರಿಸಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಕರಿಯಮ್ಮ ಚಂದ್ರಶೇಖರ್, ಉಪಾಧ್ಯಕ್ಷ ಜಿ. ಬೇವಿನಹಳ್ಳಿಯ ಆನಂದಗೌಡ, ಸದಸ್ಯ ರಾದ ಎನ್.ಎಂ. ಪಾಟೀಲ್, ಡಿ.ಎಂ. ಹರೀಶ್, ಕೆ.ಜಿ. ಬಸವರಾಜ್, ವೈ.ಆರ್. ಚೇತನ್ ಕುಮಾರ್, ವಿನೋದ ಜಿ.ಆರ್. ಹಾಲೇಶ್ ಕುಮಾರ್, ರೇಣುಕ ಪೂಜಾರ್ ನಾಗರಾಜ್, ಮಂಜುಳಾ ಸಿ.ಎನ್. ಪರಮೇಶ್ವರಪ್ಪ, ಜಿ. ಬೇವಿನಹಳ್ಳಿಯ ಕೆ.ಜಿ. ಮಹಾಂತೇಶಪ್ಪ, ದೇವರಾಜ್, ರೂಪಾ ಸೋಮಶೇಖರ್, ಪಿಡಿಒ ದಾಸರ ರವಿ, ಕಾರ್ಯದರ್ಶಿ ಶೇಖರ್‌ ನಾಯ್ಕ, ಬಿಲ್ ಕಲೆಕ್ಟರ್ ಬಿ. ಮೌನೇಶ್,ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ವಿ. ನಾಗರಾಜ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಗ್ರಾಮದ ಮುಖಂಡ ಜಿ.ಎಂ. ಆನಂದಪ್ಪ, ಗ್ರಾ.ಪಂ. ಮಾಜಿ ಸದಸ್ಯರಾದ ಎ.ಕೆ. ಅಡಿವೇಶ್, ಎ.ಕೆ. ಜಗದೀಶ್, ಜಿ.ಪಿ. ಹನುಮಗೌಡ, ಕೆ.ಎಂ. ರಾಮಪ್ಪ, ಡಿ. ಮಂಜುನಾಥ್, ಪಿಎಸಿಎಸ್‌ಸಿಇಒ ಎನ್.ಎನ್. ತಳವಾರ್ ಮತ್ತು ಗ್ರಾ.ಪಂ. ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಡಿಎಸ್‌ಎಸ್‌ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಜಿ.ಆರ್. ಚಂದ್ರಪ್ಪ, ಮುಖ್ಯ ಶಿಕ್ಷಕ ಕರಿಬಸಪ್ಪ ಪುಷ್ಪ ನಮನ ಸಲ್ಲಿಸಿದರು. ಶ್ರೀ ರಂಗನಾಥ ಬಾಲ ಕೇಂದ್ರದ ಅಧ್ಯಕ್ಷ ಡಿ.ಪಿ. ಚಿದಾನಂದ್, ಶಿಕ್ಷಕರಾದ ನಾಗೇಶ್, ಶ್ರೀ ನಿವಾಸ್ ರೆಡ್ಡಿ, ಮಲ್ಲಿಕಾರ್ಜುನ್, ಗುಡ್ಡಪ್ಪ, ಜಯಶ್ರೀ, ವೀಣಾ, ದೀಪಾ ಮತ್ತು ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published.