ಕೋವಿಡ್ ನಿಯಂತ್ರಣಕ್ಕೆ‌ ಕೈ ಜೋಡಿಸಲು ಕರೆ

ಜಗಳೂರು, ಏ.15- ಕೋವಿಡ್ ಎರಡನೇ ಅಲೆ ತಪ್ಪಿಸಲು 45 ವರ್ಷ ಮೇಲ್ಪಟ್ಟವರು ಸ್ವಯಂಪ್ರೇರಿತರಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಮನವಿ ಮಾಡಿದರು.

ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ  ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ವೀಕ್ಷಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇದೇ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಎಚ್.ಸಿ. ಮಹೇಶ್ ಹಾಗೂ ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಸೇರಿದಂತೆ, ಐವರು ಕೋವಿಡ್ ಲಸಿಕೆ ಹಾಕಿಸಿಕೊಂಡರು. ಬಿಜೆಪಿ ವೈದ್ಯ ಪ್ರಕೋಷ್ಠದ ಸಂಚಾಲಕ  ಡಾ. ಹಾಲಸ್ವಾಮಿ ಕಂಬಾಳಿಮಠ, ಪದಾಧಿಕಾರಿಗಳಾದ  ಡಾ. ಅವಿನಾಶ್,  ಡಾ. ಹಾಲೇಶ್, ಡಾ. ನಂದಿನಿ, ಡಾ. ಚೇತನ್, ಟಿಹೆಚ್‌ಒ ಡಾ. ನಾಗರಾಜ್, ಆಸ್ಪತ್ರೆ ಆಡಳಿತಾಧಿಕಾರಿ ಡಾ. ನೀರಜ್, ಪ.ಪಂ. ಉಪಾಧ್ಯಕ್ಷೆ ಲಲಿತ, ಸದಸ್ಯರಾದ ಮಂಜಮ್ಮ, ನವೀನ್, ಪ.ಪಂ. ನಾಮನಿರ್ದೇಶಿತ ಸದಸ್ಯ ಬಿ.ಪಿ. ಸುಭಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.