ಯುಬಿಡಿಟಿ ಕಾಲೇಜಿನಲ್ಲಿ ವಿಚಾರ ಸಂಕಿರಣ

ದಾವಣಗೆರೆ, ಏ.6- ರೋಟರಿ ಕ್ಲಬ್‌ ವಿದ್ಯಾನಗರ ಹಾಗೂ ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜು  ಇವರ ಸಂಯುಕ್ತಾಶ್ರಯದಲ್ಲಿ ಪರಿಸರ ಮಾಲಿನ್ಯ ಮತ್ತು ರಕ್ಷಣೆ ಕುರಿತ ವಿಚಾರ ಸಂಕಿರಣ ನಡೆಯಿತು.

ಬೆಳಗಾವಿ ವಿಟಿಯು ಕಾರ್ಯಕಾರಿ ಮಂಡಳಿ ಸದಸ್ಯ ಡಾ. ಹೆಚ್‌.ಆರ್‌. ಪ್ರಭಾಕರ್‌, ಯುಬಿಡಿಟಿ ಪ್ರಾಧ್ಯಾಪಕ ಡಿ.ಪಿ. ನಾಗರಾಜಪ್ಪ ಕಾರ್ಯಾಗಾರ ನಡೆಸಿಕೊಟ್ಟರು. ರೋಟರಿ ಕ್ಲಬ್‌ ಅಧ್ಯಕ್ಷ ಎನ್‌.ಬಿ. ಮೃತ್ಯುಂಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪರಾಜ್ಯಪಾಲ ಹೆಚ್‌.ಬಿ. ಚಂದ್ರಾಚಾರ್‌ ಮತ್ತಿತರರು ಉಪಸ್ಥಿತರಿದ್ದರು.