ಎಂ.ಪಿ.ಆರ್ ಜಾತ್ಯತೀತ, ಸಮಾಜವಾದಿ ನಾಯಕ

ಎಂ.ಪಿ.ಆರ್ ಜಾತ್ಯತೀತ, ಸಮಾಜವಾದಿ ನಾಯಕ

ಹರಪನಹಳ್ಳಿಯಲ್ಲಿ ಎಂ.ಪಿ.ಲತಾ

ಹರಪನಹಳ್ಳಿ, ಏ.6- ಎಂ.ಪಿ.  ರವೀಂದ್ರ ಜಾತ್ಯತೀತ, ಸಮಾಜವಾದಿ ನಾಯಕ ದಿ|| ಎಂ.ಪಿ. ಪ್ರಕಾಶ್‌ರಂತಹ ಸೃಜನಶೀಲ ರಾಜಕಾರಣಿ ಮತ್ತು ಧೀಮಂತ ನಾಯಕನ ಅವಶ್ಯಕತೆ ಈ ತಾಲ್ಲೂಕಿಗೆ ಬೇಕಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ದಿ|| ಎಂ.ಪಿ. ರವೀಂದ್ರ ಅವರ 52ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಿ ನಿಮ್ಮ ಜೊತೆ ನಾನಿದ್ದೇನೆ ಎಂದು ನುಡಿದಂತೆ ನಡೆದ ಎಂ.ಪಿ. ರವೀಂದ್ರ. ನಮ್ಮೆಲ್ಲರ ಪ್ರೀತಿಯ ರವಿಯಣ್ಣ ಕೊಡುಗೈ ದಾನಿ. ಯಾರಾದ್ರು ಕಷ್ಟ ಹೇಳ್ಕೊಂಡು ಬಂದ್ರೆ ಅವರನ್ನು ಎಂದೂ ಬರಿಗೈಲಿ ಕಳಿಸಿದಂತಹ ಆಸಾಮಿಯಲ್ಲ.  ರವೀಂದ್ರ  ನಮ್ಮೆಲ್ಲರ ಪ್ರೀತಿಯ ನಾಯಕ, ಕಲ್ಯಾಣ ಕರ್ನಾಟಕದ ಜನಪ್ರಿಯ ನಾಯಕ ಹೇಳಿದರು. 

ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಚಂದ್ರಪ್ಪ, ಓ. ರಾಮಪ್ಪ, ಪುರಸಭಾ ಸದಸ್ಯರಾದ ಡಿ.ಅಬ್ದುಲ್ ರಹಿಮಾನ್, ಎಂ.ವಿ ಅಂಜಿನಪ್ಪ, ಟಿ.ವೆಂಕಟೇಶ್, ಗೊಂಗಡಿ ನಾಗರಾಜ್, ಗಣೇಶ್, ವಸಂತಪ್ಪ, ಚಿಕ್ಕೇರಿ ಬಸಪ್ಪ, ಟಿ.ಹೆಚ್.ಎಂ ಮಂಜುನಾಥ್, ಬಸಾಪುರದ ಮಂಜುನಾಥ್, ಕಂಚಿಕೇರಿ ಜಯಲಕ್ಷ್ಮಿ, ಗುಂಡಗತ್ತಿ ನೇತ್ರಾವತಿ, ಉಮಾ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ಮೈದೂರು ರಾಮಣ್ಣ, ಒ.ಮಹಾಂತೇಶ್, ಯಡಿಹಳ್ಳಿ ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.