ಭಿತ್ತಿ ಪತ್ರ ಹಂಚಿ ಸಾರಿಗೆ ನೌಕರರ ಪ್ರತಿಭಟನೆ

ಭಿತ್ತಿ ಪತ್ರ ಹಂಚಿ ಸಾರಿಗೆ ನೌಕರರ ಪ್ರತಿಭಟನೆ

ದಾವಣಗೆರೆ, ಏ.4- ಇದೇ 7ರಂದು ರಾಜ್ಯಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ನಗರದ ಗಾಂಧಿ ವೃತ್ತದಲ್ಲಿಂದು ಸಾರಿಗೆ  ನೌಕರರ ಕೂಟದ ನೇತೃತ್ವದಲ್ಲಿ ಬೇಡಿಕೆಗಳ ಕುರಿತಾದ ಭಿತ್ತಿ ಪತ್ರಗಳನ್ನು ಸಾರ್ವಜನಿಕವಾಗಿ ಹಂಚುವ ಮುಖೇನ ಪ್ರತಿಭಟಿಸಲಾಯಿತು.

ಪ್ರಮುಖ ಬೇಡಿಕೆಯಾದ 6ನೇ ವೇತನ ಯಥಾವತ್ ಸೇರಿದಂತೆ 8 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲಾಯಿತು. 

ಈ ಸಂದರ್ಭದಲ್ಲಿ ಮುಖಂಡರಾದ ಎಸ್. ಓಂಕಾರಪ್ಪ, ಹೆಚ್. ಅಂಜನಪ್ಪ, ಹೆಚ್. ಏಳುಕೋಟಿ,  ಪುಷ್ಪಾ ಭಜಂತ್ರಿ, ಮಹೇಂದ್ರ, ಸುರೇಶ, ಶೇಖರಪ್ಪ ಮತ್ತು ಸದಸ್ಯರು ಇದ್ದರು. ಶನಿವಾರವೂ ಸಹ 6ನೇ ವೇತನ ಜಾರಿಯ  ಘೋಷಣೆಗಳುಳ್ಳ ಭಿತ್ತಿ ಪತ್ರವನ್ನು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಆವರಣದಲ್ಲಿನ ಡಿಪೋ ಬಳಿ ಪ್ರದರ್ಶಿಸಲಾಗಿದೆ.