ಪಾದಯಾತ್ರೆಗೆ ತಿರುವು ನೀಡಿದ್ದ ಹರಪನಹಳ್ಳಿ

ಪಾದಯಾತ್ರೆಗೆ ತಿರುವು ನೀಡಿದ್ದ ಹರಪನಹಳ್ಳಿ

ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಬಸವ ಜಯ ಮೃತ್ಯುಂಜಯ ಶ್ರೀ

ಹರಪನಹಳ್ಳಿ, ಏ.4- ಪಂಚಮಸಾಲಿ ಪೀಠದ  ಉಭಯ ಶ್ರೀಗಳ ಸಮಾಗಮಕ್ಕೆ ಸಾಕ್ಷಿಯಾದ ಹರಪನಹಳ್ಳಿ, ನಮ್ಮ ಪಾದಯಾತ್ರೆಗೆ ಹೊಸ ತಿರುವನ್ನು ನೀಡಿದೆ ಎಂದು ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಪಂಚಮಸಾಲಿ ಪತ್ತಿನ ಸಹಕಾರಿ ಬ್ಯಾಂಕ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಶರಣು ಶರಾಣಾರ್ಥಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು  ಮಾತನಾಡಿದರು.

ಕರ್ನಾಟಕದ ಇತಿಹಾಸದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ ಪಂಚಮಸಾಲಿ ಸಮಾಜದ ಸಮಾವೇಶ ಮೈಲಿಗಲ್ಲಾಗಿದೆ. ಐತಿಹಾಸಿಕ ಪಂಚಮಸಾಲಿ ಬೃಹತ್‌ ಸಮ್ಮೇಳನದ ಬಳಿಕ ಸುಪ್ರೀಂ ಕೋರ್ಟ್‌ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ಸಮಾಜದ ಚಳುವಳಿಯೇ ಕಾರಣ ಎಂದು ಹೇಳಿದರೆ ತಪ್ಪಾಗಲಾರದು ಎಂದರು. 

ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಅಧ್ಯಕ್ಷ ಡಾ. ವಿಜಯನಂದ ಕಾಶಪ್ಪನವರ್ ಮಾತ ನಾಡಿ, ಸರ್ಕಾರ ಸೆಪ್ಟಂಬರ್ 15ರ ನಂತರ ಮೀಸ ಲಾತಿ ಘೋಷಿಸದಿದ್ದರೆ ಮತ್ತೆ ಉಗ್ರ ಹೋರಾಟ ಮಾಡಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.

 ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಅಕ್ಷರ ಸೀಡ್ಸ್‌ ಮಾಲೀಕ ಅರಸಿಕೇರಿ ಎನ್. ಕೊಟ್ರೇಶ್, ಕಂಚಿಕೇರಿ ಎಂ.ಟಿ. ಸುಭಾಶ್‍ಚಂದ್ರ,  ಸಾರಿಗೆ ನಿಗಮದ ನಿರ್ದೇಶಕ ಆರುಂಡಿ ನಾಗರಾಜ್, ಬಳ್ಳಾರಿ ಜಿಲ್ಲಾ ಟಾಸ್ಕ್‌ಪೋರ್ಸ್   ಸದಸ್ಯ ಶಶಿಧರ ಪೂಜಾರ, 2ಎ ಮೀಸಲಾತಿ ಹೋರಾಟ ಸಮಿತಿ  ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಪೂಜಾರ,  ಗೌರವಾಧ್ಯಕ್ಷ ಎಂ.ಪರಮೇಶ್ವರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಪಿ.ಕರಿಬಸಪ್ಪ, ಕಾರ್ಯದರ್ಶಿ ಬಸವರಾಜ ಅಡವಿಹಳ್ಳಿ, ತಿಮ್ಲಾಪುರ ನಾಗರಾಜ, ಬಳ್ಳಾರಿ ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ್, ದಾವಣಗೆರೆ ಜಿಲ್ಲಾಧ್ಯಕ್ಷ ಆರ್.ವಿ.  ಅಶೋಕ ಗೋಪನಾಳ್,  ಪುರಸಭೆ ಮಾಜಿ ಅಧ್ಯಕ್ಷೆ ಪುಷ್ಪ ದಿವಾಕರ್‌, ಮುಖಂಡರುಗಳಾದ  ಕುಂಚೂರು ಎ. ವೀರಣ್ಣ, ಪೂಜಾರ ಮಂಜಣ್ಣ, ನೀಲಗುಂದ ಸಿದ್ದಲಿಂಗಪ್ಪ, ವಿಜಯ ದಿವಾಕರ್‌, ಬೋರ್‌ವೆಲ್ ಶಂಭಣ್ಣ, ಹಾರಕನಾಳು ಪ್ರಕಾಶ ಗೌಡ,  ಲೀಲಾ ಲಿಂಗರಾಜ್, ಚಿಗಟೇರಿ ಗಾಯ ತ್ರಮ್ಮ  ಸಿದ್ದಲಿಂಗನ ಗೌಡ ಇನ್ನಿತರರಿದ್ದರು.