ಪರಿಶ್ರಮಕ್ಕೆ ಒಳಗಾದವರಿಗೆ ಯಾವ ರೋಗವೂ ಬರುವುದಿಲ್ಲ

ಪರಿಶ್ರಮಕ್ಕೆ ಒಳಗಾದವರಿಗೆ ಯಾವ ರೋಗವೂ ಬರುವುದಿಲ್ಲ

ಶಿವಮೂರ್ತಿ ಶರಣರು

ಚಿತ್ರದುರ್ಗ ಮಾ. 30 – ಕೊರೊನಾಕ್ಕಿಂತ ಮೊದಲು ಜಗತ್ತು ಹಣ, ಅಧಿಕಾರ, ಆಸ್ತಿಯ ಜೊತೆ ಸಾಗುತ್ತಿತ್ತು. ಕೊರೊನಾ ನಂತರ ಯಾವುದೂ ಶಾಶ್ವತ ಅಲ್ಲ, ಆರೋಗ್ಯವೇ ಭಾಗ್ಯ ಎನ್ನುವ ಮಟ್ಟಕ್ಕೆ ಬಂದಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಒಪಿಡಿ ಬ್ಲಾಕ್, ಎಸ್.ಜೆ.ಎಂ. ಹೆಲ್ತ್ ಪ್ರಿವಿಲೇಜ್ ಕಾರ್ಡ್ ಮತ್ತು ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶರಣರು, ಶ್ರೀಮಂತರಾಗುವುದಕ್ಕಿಂತ ಆರೋಗ್ಯವಂತರಾಗಬೇಕು. ಪರಿಶ್ರಮಕ್ಕೆ ಒಳಗಾದವರಿಗೆ ಯಾವ ರೋಗವೂ ಬರುವುದಿಲ್ಲ. ಅವರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ ಎಂದರು. 

ಆಸ್ಪತ್ರೆಯಲ್ಲಿ ಹೃದಯರೋಗ, ತುರ್ತುಚಿಕಿತ್ಸಾ ವಿಭಾಗ, ಸಂಪೂರ್ಣ ಹೃದಯ ತಪಾಸಣೆ, 24×7 ಕ್ಯಾಥ್‌ಲ್ಯಾಬ್, ಸಿಸಿಯು/ಐಸಿಯು, ಔಷಧಾಲಯ, ಹೃದಯ ತುರ್ತು ಚಿಕಿತ್ಸೆ, ಇಕೋ, ಟಿಎಂಟಿ ಸೌಲಭ್ಯಗಳಿವೆ. ಇಂದು ಸೂಪರ್ ಸ್ಪೆಷಾಲಿಟಿ ಒಪಿಡಿಯನ್ನು ತೆರೆಯಲಾಗಿದೆ. ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆಗೆ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ. ಹೆಲ್ತ್ ಪ್ರಿವಿಲೇಜ್ ಕಾರ್ಡ್ ಬಿಡುಗಡೆಗೊಳಿಸಲಾಗಿದ್ದು, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ ಎಂದು ಶ್ರೀಗಳು ತಿಳಿಸಿದರು.

ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಜಿ. ರಾಧಿಕಾ, ಅಧಿಕಾರಿಗಳಾದ ಡಾ. ಸಿ.ಎಲ್. ಪಾಲಾಕ್ಷ, ಡಾ. ಬಸವರಾಜು, ಎಸ್.ಜೆ.ಎಂ. ಎ.ಜೆ. ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಡಾ. ಜಿ. ಪ್ರಶಾಂತ್ ಹಾಗೂ ಡಾ. ಎಲ್. ಪಾಲಾಕ್ಷಯ್ಯ, ಡಾ. ಸುರೇಶ್ ಕಡ್ಲಿ, ಡಾ. ನಾರಾಯಣಮೂರ್ತಿ, ಡಾ. ನಾಗೇಂದ್ರ, ಡಾ. ರಾಜೇಶ್, ಡಾ. ಸುಜಯ್, ಡಾ. ಮಂಜುನಾಥ್, ಡಾ. ವಿವೇಕ್, ಡಾ. ಕಿರಣ್‍ಕುಮಾರ್ ವೇದಿಕೆಯಲ್ಲಿದ್ದರು.

ಡಾ. ಪ್ರಶಾಂತ್ ಸ್ವಾಗತಿಸಿದರು. ಹೇಮಲತಾ, ಸೌಭಾಗ್ಯ ಪ್ರಾರ್ಥಿಸಿದರು. ಡಾ. ಶರತ್‍ಕುಮಾರ್, ಡಾ. ಅಪರ್ಣಾ ನಿರೂಪಿಸಿದರು. ಡಾ.ಪಾಲಾಕ್ಷಯ್ಯ ವಂದಿಸಿದರು.

Leave a Reply

Your email address will not be published.