ಹರಪನಹಳ್ಳಿ : ಕಂಚಿಕೇರಿ ಶೇ.84, ಮತ್ತಿಹಳ್ಳಿ ಶೇ.80 ಮತದಾನ

ಹರಪನಹಳ್ಳಿ : ಕಂಚಿಕೇರಿ ಶೇ.84, ಮತ್ತಿಹಳ್ಳಿ ಶೇ.80 ಮತದಾನ

ಹರಪನಹಳ್ಳಿ, ಮಾ.29- ತಾಲ್ಲೂಕಿನ ಎರಡು ಕಡೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ  ಕಂಚಿಕೇರಿ ಶೇ.84.12 ಹಾಗೂ ಮತ್ತಿಹಳ್ಳಿಯಲ್ಲಿ ಶೇ. 80.12 ರಷ್ಟು ಮತದಾನವಾಗಿದೆ.

ಕಂಚಿಕೇರಿಯಲ್ಲಿ 7,510 ಮತದಾರರಲ್ಲಿ ಪುರುಷ-3,272 ಹಾಗೂ ಮಹಿಳಾ ಮತದಾರರ-3051 ಸೇರಿ, ಒಟ್ಟು 6,323 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತ್ತಿಹಳ್ಳಿಯಲ್ಲಿ  ಒಟ್ಟು  2,098 ಮತದಾರರಲ್ಲಿ ಪುರುಷ ಮತದಾರರು-871 ಮಹಿಳೆಯರು-810 ಒಟ್ಟು 1,681ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಕಂಚಿಕೇರಿ ಗ್ರಾ.ಪಂ.ನ ಅಧಿಕಾರ ಅವಧಿ ಇತ್ತೀಚೆಗೆ ಮುಕ್ತಾಯ ಗೊಂಡಿತ್ತು. ಮತ್ತಿಹಳ್ಳಿಯಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ 7 ಸ್ಥಾನಗಳಿಗೆ ನಿಯೋಜಿ ಸಿದ್ದ ಮತಗಟ್ಟೆಗಳಲ್ಲಿ ವಾರ್ಡ್‌ಗಳ ಮತ ಪತ್ರ ಅದಲು ಬದಲಾಗಿವೆ ಎಂದು ಆರೋಪಿಸಿ, ಮತದಾರರು ಚುನಾವಣೆ ಬಹಿಷ್ಕರಿಸಿದ್ದರಿಂದ  7 ಸ್ಥಾನಗಳಿಗೆ ಮಾತ್ರ ಈಗ ಚುನಾವಣೆ ಜರುಗಿದೆ. ಕಂಚಿಕೇರಿ ಗ್ರಾ.ಪಂ.ಗೆ ಮಹೇಶ ಪೂಜಾರ ಚುನಾವಣಾಧಿಕಾರಿಯಾಗಿ, ಉದಯಶಂಕರ್ ಸಹಾಯಕ ಚುನಾವಣಾಧಿಕಾರಿ ಯಾಗಿ, ಮತ್ತಿಹಳ್ಳಿ ಗ್ರಾ.ಪಂ.ಗೆ ಶಿವಯೋಗಿ ಚುನಾವಣಾಧಿಕಾರಿಯಾಗಿ, ಸಹಾಯಕ ಚುನಾವಣಾಧಿಕಾರಿಯಾಗಿ  ಕಬೀರನಾಯ್ಕ ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ್ ನಂದೀಶನಾಯ್ಕ 2 ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲಿಸಿದರು.