ಕೊರೊನಾ ಚಿಂತೆ ದೂರ ಮಾಡಿದ ಹೋಳಿ ಸಂಭ್ರಮ

ಕೊರೊನಾ ಚಿಂತೆ ದೂರ ಮಾಡಿದ ಹೋಳಿ ಸಂಭ್ರಮ

ರಾಣೇಬೆನ್ನೂರು, ಮಾ.29- ನಗರದಲ್ಲಿ ಇಂದು ನಡೆದ ಬಣ್ಣದ ಹಬ್ಬ ಹೋಳಿ, ಕೊರೊನಾ ಚಿಂತೆಯನ್ನು ದೂರ ಮಾಡಿದಂತೆ ಕಂಡುಬಂದಿತು. 

ಬೆಳಗ್ಗೆಯಿಂದಲೇ ಚಿಣ್ಣರು ರಾಜೇಶ್ವರಿನಗರ, ಮೃತ್ಯುಂ ಜಯನಗರ, ಹೌಸಿಂಗ್ ಬೋರ್ಡ್ ಕಾಲೋನಿ, ಗೌರಿ ಶಂಕರ ನಗರ, ಬನಶಂಕರಿ ನಗರ, ದೊಡ್ಡಪೇಟೆ, ಕುರುಬ ಗೇರಿ, ಮಾರುತಿನಗರ, ಕೋಟೆ ಮುಂತಾದ ಪ್ರದೇಶಗಳಲ್ಲಿ ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬ ಆರಂಭಿಸಿದರು. 

ಹತ್ತು ಗಂಟೆ ನಂತರ ಯುವಕರು, ವಯಸ್ಕರು ರಂಗಿನಾಟಕ್ಕೆ ಮುಂದಾದರು. ಹೌಸಿಂಗ್ ಬೋರ್ಡ್ ಕಾ ಲೋನಿ, ವೀರಭದ್ರೇಶ್ವರ ನಗರ, ದೊಡ್ಡಪೇಟೆ ಮುಂತಾದ ಪ್ರದೇಶಗಳಲ್ಲಿ ಮಹಿಳೆಯರು ಕೂಡ ಹೆಚ್ಚಿನ ಉತ್ಸಾಹದಿಂದ ಬಣ್ಣದಾಟದಲ್ಲಿ ನಿರತ ರಾಗಿದ್ದರು.  

ಶಾಸಕರು ಭಾಗಿ: ಸ್ಥಳೀಯ ಶಾಸಕ ಅರುಣ ಕುಮಾರ ಪೂಜಾರ್‌ ತಾವೇ ಸ್ವತಃ ಬೈಕ್ ಮೇಲೆ ಸಂಚರಿ ಸುತ್ತಾ ಯುವಕರ ತಂಡದೊಂ ದಿಗೆ ನಗರದ ತುಂಬಾ ಬಣ್ಣದಾಟದಲ್ಲಿ ಭಾಗಿಯಾಗಿದ್ದರು.  ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹರಿಜನ ಕೇರಿಯಿಂದ ಬೆಂಕಿ ತಂದ ನಂತರ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಕಾಮಣ್ಣನ ಮೂರ್ತಿಗಳನ್ನು ದಹಿಸಲಾಯಿತು. 

ಬೈಕ್ ಹೋಳಿ: ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೈಕುಗಳ ಮೇಲೆ ತಿರುಗಾಡುತ್ತಾ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಒಂದೇ ಬೈಕಿನ ಮೇಲೆ 3-4 ಜನ ಸೇರಿ ನಗರದ ತುಂಬಾ ಸಂಚರಿಸಿದರು. ಈ ಬಾರಿ ಪುರುಷರಿಗೆ ಸರಿಸಮಾನ ಎನ್ನುವಂತೆ ಮಹಿಳೆಯರು ಕೂಡ ದ್ವಿಚಕ್ರ ವಾಹನ ಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಬಣ್ಣದಾಟ ಆಡುತ್ತಾ ಹೋಳಿ ಸಂಭ್ರಮಕ್ಕೆ ಮೆರುಗು ತಂದರು.