ಮಹಿಳಾ ದಿನಾಚರಣೆ : ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ

ಮಹಿಳಾ ದಿನಾಚರಣೆ : ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ

ದಾವಣಗೆರೆ, ಮಾ.21- ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದಾವಣಗೆರೆ ದಕ್ಷಿಣದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಇಂದು ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗೌರವಿಸಿದರು.

ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೃಹ ಕಛೇರಿ ಶಿವಪಾರ್ವತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಿದ ಡಾ. ಶಾಮನೂರು ಶಿವಶಂಕರಪ್ಪನವರು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಸೆಸ್ ಅವರು, 12ನೇ ಶತಮಾನದಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮಾನರು ಎಂಬುದನ್ನು ಪ್ರತಿಪಾದಿಸಿದ ಬಸವಣ್ಣನವರು, ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸ್ಥಾನ ಕಲ್ಪಿಸುವ ಮೂಲಕ ಜಾರಿಗೆ ತಂದರು. ಇಂದು ದೇಶದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಸಾಧನೆ ಮೆರೆದಿದ್ದಾರೆ. ರಾಜಕೀಯ ಮತ್ತು ಶೈಕ್ಷಣಿಕವಾಗಿ ಪುರುಷರಷ್ಟೇ ಸಮಾನರಾಗಿರುವ ಮಹಿಳೆಯರಿಗೆ ಸಾಮಾಜಿಕ ಸಮಾನತೆ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರಿಯಾಂಕ, ಮಾಧವಿ ಡಿ.ಕೆ. ಗೋಪಾಲಕೃಷ್ಣ, ಉಪನ್ಯಾಸಕಿ ಓಂಕಾರಮ್ಮ ಅವರುಗಳು ಗೌರವ ಪಡೆದು ಮಾತನಾಡಿದರು.

ಶ್ರೀಮತಿ ಶೈಲಜಾ ದಾದಾಪೀರ್ (ಪಿಎಸೈ, ಆಜಾದ್ ನಗರ ಪೊಲೀಸ್ ಠಾಣೆ) ಮಾಧವಿ ಡಿ.ಕೆ. (ಭರತ ನಾಟ್ಯ) ಕಾವ್ಯ ಬಿ.ಕೆ. (ಮಾಧ್ಯಮ ಕ್ಷೇತ್ರ) ಪ್ರಿಯಾಂಕ (ಹಣಕಾಸು ಅಧಿಕಾರಿ, ದಾವಣಗೆರೆ ವಿವಿ) ಓಂಕಾರಮ್ಮ (ಶಿಕ್ಷಣ) ಅನಿತಾ ಮತ್ತು ಸ್ಪೂರ್ತಿ (ವಿದ್ಯಾರ್ಥಿ ಸಮೂಹ) ಆಶಾ ಕಾಂಬ್ಳೆ (ಸೂಪರಿಂ ಟೆಂಡೆಂಟ್ ಸ್ಟಾಫ್ ನರ್ಸ್, ಜಿಲ್ಲಾಸ್ಪತ್ರೆ) ರತ್ನಮ್ಮ ಮತ್ತು ಈರಮ್ಮ (ಪೌರ ಕಾರ್ಮಿಕರು) ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ ಗೌರವ ಪಡೆದ ಮಹಿಳಾ ಸಾಧಕಿಯರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್, ಕವಿತಾ ಚಂದ್ರಶೇಖರ್, ಉಮಾ ಕುಮಾರ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಆಶಾ ಮುರುಳಿ, ಶುಭಮಂಗಳ, ನಾಗರತ್ನಮ್ಮ, ಶ್ರೀಮತಿ ಲಕ್ಷ್ಮಿಬಾಯಿ ಆವರಗೆರೆ ಅಣ್ಣೇಶ್ ನಾಯ್ಕ, ರಹತಾಜ್ ದಾದಾಪೀರ್, ರುದ್ರಮ್ಮ, ಮಂಗಳಮ್ಮ,  ಮಂಜುಳಮ್ಮ, ಗೀತಾ ಚಂದ್ರಶೇಖರ್, ಗೌರಮ್ಮ, ಸಂಗೀತಾ, ಜಯಮ್ಮ, ಸಲ್ಮಾಬಾನು, ಇಂದ್ರಮ್ಮ, ಮಂಗಳಮ್ಮ, ಗೀತಾ, ಕಲಾವತಿ, ಶಿಲ್ಪ, ಜ್ಯೋತಿ, ಕೊಡಪಾನ ದಾದಾಪೀರ್, ಸಾಗರ್ ಎಲ್‌.ಎಂ.ಹೆಚ್. ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.