22ಕ್ಕೆ ಸಪ್ತಗಿರಿ ವಿದ್ಯಾಲಯದಲ್ಲಿ ನಾಮ ಸಹಸ್ರಮ್

ದಾವಣಗೆರೆ, ಮಾ.19- ವಿವೇಕ ಶಿಕ್ಷಣ ವಾಹಿನಿ ಮತ್ತು ಸಪ್ತಗಿರಿ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಾ.22ರಂದು ನಗರದ ಸಪ್ತಗಿರಿ ವಿದ್ಯಾಲಯದಲ್ಲಿ ನಾಮ ಸಹಸ್ರಮ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ರವರೆಗೆ  ತರಬೇತಿ ಪಡೆದ 320 ವಿದ್ಯಾರ್ಥಿಗಳು ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಪಠಿಸಲಿದ್ದಾರೆ. ಸರಸ್ವತಿ ಹೋಮ ಮತ್ತು ದಿವ್ಯಸತ್ಸಂಗ ಕಾರ್ಯಕ್ರಮ ನಡೆಯಲಿದೆ ಎಂದು ವಿವೇಕ ಶಿಕ್ಷಣ ವಾಹಿನಿ ರಾಜ್ಯ ಸಂಯೋಜಕ ಪ್ರಭಂಜನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ದಾವಣಗೆರೆ ರಾಮಕೃಷ್ಣ ಮಿಷನ್ ಮುಖ್ಯಸ್ಥ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್, ರಾಣೇಬೆನ್ನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್, ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶಾರದೇಶಾ ನಂದಜೀ ಮಹಾರಾಜ್, ಹೊಸಪೇಟೆ ರಾಮಕೃಷ್ಣ ಗೀತಾ ಶ್ರಮ ಅಧ್ಯಕ್ಷ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸುವರು. ಸಪ್ತಗಿರಿ ವಿದ್ಯಾಲಯದ ಮುಖ್ಯಸ್ಥ ರಾಮಮೂರ್ತಿ, ವಾಗ್ಮಿ ನಿತ್ಯಾನಂದ ವಿವೇಕ ವಂಶಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಪ್ತಗಿರಿ ವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಂತೇಶ ಭಾರತಿ, ಮುಖ್ಯೋಪಾಧ್ಯಾಯ ದೇವರಾಜ್ ಇದ್ದರು.