ವಿದ್ಯಾರ್ಥಿಗಳಿಗೆ ಕೋವಿಡ್‍ ತಪಾಸಣೆ

ವಿದ್ಯಾರ್ಥಿಗಳಿಗೆ ಕೋವಿಡ್‍ ತಪಾಸಣೆ

ದಾವಣಗೆರೆ, ಮಾ. 19 – ಬಿ.ಜೆ.ಎಂ ಹಾಗೂ ಜಿ.ಎನ್.ಬಿ. ಆಂಗ್ಲ ಮಾಧ್ಯಮ ಪ್ರೌಢಶಾಲೆ ದಾವಣಗೆರೆ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ 6 ರಿಂದ 10ನೇ ತರಗತಿಯ ಸುಮಾರು 202 ವಿದ್ಯಾರ್ಥಿಗಳಿಗೆ ಕೋವಿಡ್‍ ತಪಾಸಣಾ ಶಿಬಿರ ನಡೆಯಿತು. ದಾವಣಗೆರೆ ಉತ್ತರ ವಲಯ ಶಿಕ್ಷಣ ಸಂಯೋಜಕ ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ಗಾಯತ್ರಿ, ಶಾಲೆ ಮುಖ್ಯ ಶಿಕ್ಷಕಿ ಲಲಿತ ಪಾಲ್ಗೊಂಡಿದ್ದರು.