ಲಕ್ಷ್ಮಣರಾವ್ ಸಾಳಂಕಿ ಅವರಿಗೆ ನಡಿಗೆಯಲ್ಲಿ ದ್ವಿತೀಯ ಸ್ಥಾನ

ದಾವಣಗೆರೆ, ಮಾ. 19- ಈಚೆಗೆ ಬೆಂಗಳೂರಿನ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ (ರಿ.) ವತಿಯಿಂದ ನಡೆದ 2ನೇ ಕರ್ನಾಟಕ ಮಾಸ್ಟರ್ಸ್ ಗೇಮ್ಸ್ -2021 ರ ಸ್ಪರ್ಧೆಯಲ್ಲಿ ನಗರದ ಅಂತರರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣರಾವ್ ಸಾಳಂಕಿ ಅವರು 65 ವರ್ಷ ಮೇಲ್ಪಟ್ಟ 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ, 1500 ಮೀ. ಓಟದಲ್ಲಿ 2ನೇ ಸ್ಥಾನ, 10 ಮೀ. ಓಟದಲ್ಲಿ 3ನೇ ಸ್ಥಾನ ಪಡೆದಿದ್ದಾರೆ.