ಹೊನ್ನಾಳಿ : ರಾಜ್ಯ ಬಜೆಟ್‌ಗೆ ಖಂಡನೆ

ಹೊನ್ನಾಳಿ : ರಾಜ್ಯ ಬಜೆಟ್‌ಗೆ ಖಂಡನೆ

ಹೊನ್ನಾಳಿ, ಮಾ.15- ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಎಐಟಿಯುಸಿ ಫೆಡರೇಷನ್ ಹೊನ್ನಾಳಿ ಘಟಕದ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಸಿಐಟಿಯು ಸಂಘಟನೆಯ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎದುರು ನೂರಾರು ಕಾರ್ಯಕರ್ತೆಯರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಘಟಕದ ಅಧ್ಯಕ್ಷೆ ಚನ್ನಮ್ಮ ಮಾತನಾಡಿ, ಬಜೆಟ್‌ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾ ಯಕಿಯರ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಇದನ್ನು ಖಂಡಿಸಿ ರಾಜ್ಯಾದ್ಯಂತ ಒಂದು ದಿನದ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದರು.

ತಹಶೀಲ್ದಾರ್ ಬಸನಗೌಡ ಕೋಟೂರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆಯ ಉಪಾಧ್ಯಕ್ಷೆ ರೇಣುಕಮ್ಮ, ಗೌರವಾಧ್ಯಕ್ಷೆ ಕೆ.ಜಿ. ಗೀತಾ, ಕಾರ್ಯದರ್ಶಿ ಎ.ಎಸ್. ವಸಂತ, ಖಜಾಂಚಿ ಶಾರದಾದೇವಿ ಇನ್ನಿತರರಿದ್ದರು.

Leave a Reply

Your email address will not be published.