ಸಾಮೂಹಿಕ ಉಪನಯನ, ವಿವಾಹ

ದಾವಣಗೆರೆ, ಮಾ.13- ದೈವಜ್ಞ ದಿವ್ಯಜ್ಯೋತಿ ಮಿತ್ರ ಮಂಡಳಿಯಿಂದ 22ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 2 ರಂದು ದೈವಜ್ಞ ಸಮಾಜ ಬಾಂಧವರಿಗಾಗಿ ಉಚಿತ ಸಾಮೂಹಿಕ ಉಪನಯನ ಹಾಗೂ ಉಚಿತ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಂಡಳಿಯ ಸಂಸ್ಥಾಪಕ ಹೆಚ್.ಜಿ.ಹನುಮಂತರಾವ್ ಪಾಲನಕರ್‌ ಹಾಗೂ ಅಧ್ಯಕ್ಷ ವಿಮಲೇಶ್ವರ ಜಿ.ರೇವಣಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿವಾಹ ಮಹೋತ್ಸವ ಹಾಗೂ ಉಪನಯನದಲ್ಲಿ ಪಾಲ್ಗೊಳ್ಳುವವರು ಏಪ್ರಿಲ್ 20 ರೊಳಗಾಗಿ ಹೆಚ್.ಜಿ.ಹನುಮಂತರಾವ್ ಪಾಲನಕರ್ (7899881161), ಗುರುನಾಥ ಡಿ.ಪಾಲನಕರ್ (7019527392), ವಿಮಲೇಶ್ವರ ಜಿ.ರೇವಣಕರ್ (94489 80155)ಗೆ ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಪದಾಧಿಕಾರಿಗಳಾದ ಗುರುನಾಥ ಡಿ.ಪಾಲನಕರ್, ಮೂರ್ತಿ ಜಿ.ಕುಡ್ತರ್‌ಕರ್, ರಾಘವೇಂದ್ರ ಎ.ವೆರ್ಣೇಕರ್, ದೇವಾ ನಂದ ಎಸ್.ಗಾಂವಕರ್ ಉಪಸ್ಥಿತರಿದ್ದರು.