ಪವರ್‌ ಲಿಫ್ಟಿಂಗ್‌ : ವಿಶ್ವನಾಥ್‌ಗೆ ಕಂಚು

ದಾವಣಗೆರೆ, ಮಾ.12- ಉಡುಪಿ ಜಿಲ್ಲೆಯ ಸಾಲಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟು ಪಿ. ವಿಶ್ವನಾಥ್‌ 93 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಇವರನ್ನು ಶಶಿ ಸೋಪ್‌ ಫ್ಯಾಕ್ಟರಿ ಮಾಲೀಕ ಡಾ. ರವಿ ಇಳಂಗೋ, ಅಂತರರಾಷ್ಟ್ರೀಯ ಕ್ರೀಡಾಪಟು ಗಳಾದ ದಾದಾಪೀರ್‌, ಬಿ. ರೇವಣ್ಣ, ಬೀರೇಶ್ವರ ವ್ಯಾಯಾಮ ಶಾಲೆಯ ಮುಖಂಡರು, ಬಳ್ಳಾರಿ ಷಣ್ಮುಖಪ್ಪ, ರಿಯಲ್‌ ಎಸ್ಟೇಟ್‌ ಉದ್ಯಮಿ ಗೋಪಾಲರಾವ್‌ ಮಾನೆ, ಕನ್ನಿಕಾ ಪರಮೇಶ್ವರಿ ಬ್ಯಾಂಕ್‌ ಅಧ್ಯಕ್ಷ ಆರ್‌.ಜಿ. ಶ್ರೀನಿವಾಸಮೂರ್ತಿ ಮತ್ತಿತರರು ಅಭಿನಂದಿಸಿದ್ದಾರೆ.