ಶಿವರಾತ್ರಿ

ಶಿವರಾತ್ರಿ

ಮುಕ್ತಿಯ ಕರುಣಿಸುವ ಮಹಾದೇವ
ದುಷ್ಟ ದುರುಳ ನಾಸ್ತಿಕರ ಸಂಹರಿಸುತ
ಶಿಷ್ಟರ ಸದಾ ಪೊರೆಯುವ ಪರಮಶಿವ.

ಶಿಶಿರ ಋತುವಿನ ಮಾಘ ಮಾಸದಿ
ಕೃಷ್ಣ ಪಕ್ಷದ ಚತುರ್ದಶಿಯ ದಿನದಿ
ತನುಮನ ಶುದ್ಧಿಯಲಿ ಉಪವಾಸದಿ
ಶಿವನಾಮವ ಸ್ಮರಿಸುವರು ಮಂದಿ.

ದೇವರ ದೇವ ಮಹಾದೇವನೊಲಿಸಲು
ಉಪವಾಸ, ಜಾಗರಣೆ ಮಾಡಿರೆನ್ನುವ ರಾತ್ರಿ
ಮನದಂಧಕಾರವ ಕಳೆದು ಸನ್ಮಾರ್ಗದಲಿ
ಮಾನವರ ನಡೆಸುವ ಮಂಗಳಕರ ಶಿವರಾತ್ರಿ.


ಹೆಚ್. ಶಿವಮೂರ್ತಿ
ಕನ್ನಡ ಶಿಕ್ಷಕರು, ದಾವಣಗೆರೆ.
shivamurthyh2012@gmail.com