ಮೀನುಗಾರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ವಾಸುದೇವಮೂರ್ತಿ

ಮಲೇಬೆನ್ನೂರು, ಫೆ.27- ರಾಷ್ಟ್ರೀಯ ಮೀನುಗಾರರ ಸಂಘದ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿಯನ್ನಾಗಿ ಕುಂಬಳೂರು ಗ್ರಾಮದ ಎಂ.ವಾಸುದೇವ ಮೂರ್ತಿ ಅವರನ್ನು ನೇಮಕ ಮಾಡಿ ರಾಜ್ಯದ ಕಾರ್ಯಾಧ್ಯಕ್ಷ ಮಂಜುನಾಥ್ ಬಿ.ಸುಣಗಾರ್ ಅವರು ಆದೇಶ ಹೊರಡಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ ಯು.ಆರ್.ಸಭಾಪತಿ, ರಾಜ್ಯ ಘಟಕದ ಅಧ್ಯಕ್ಷ ರಾಮ ಮೊಗೇರ ಅವರ ಶಿಫಾರಸ್ಸಿನ ಮೇರೆಗೆ ಐವರು ರಾಜ್ಯ ಉಪಾಧ್ಯಕ್ಷರು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು, ನಾಲ್ವರು ಸಂಘಟನಾ ಕಾರ್ಯದರ್ಶಿಗಳು, ಹತ್ತು ಜನ ಕಾರ್ಯದರ್ಶಿಗಳು, ಇಬ್ಬರು ಸಹ ಕಾರ್ಯದ ರ್ಶಿಗಳು, ಇಬ್ಬರು ಕಾರ್ಯ ನಿರ್ವಾಹಕ ಕಮಿಟಿ ಸದಸ್ಯರನ್ನು ನೇಮಕ ಮಾಡಲಾಗಿದೆ.