ವಿಜೃಂಭಣೆಯ ಶ್ರೀ ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ

ವಿಜೃಂಭಣೆಯ ಶ್ರೀ ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ

ರಾಣೇಬೆನ್ನೂರು, ಫೆ. 23- ನಗರದ ಸಿದ್ದೇಶ್ವರ ನಗರ, 3ನೇ ಕ್ರಾಸ್‌ನಲ್ಲಿರುವ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಪದ್ಮಸಾಲಿ ಸಮಾಜದ ಕುಲತಿಲಕ ಶ್ರೀ ಗುರು ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವ, ಪಾಲಕಿ ಉತ್ಸವವು ನಿನ್ನೆ ವಿಜೃಂಭಣೆಯಿಂದ ಜರುಗಿತು.

ಶ್ರೀ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಗುರುಮಠದ ಮಹಾಸಂಸ್ಥಾ ನದ ಪೀಠಾಧ್ಯಕ್ಷ ಶ್ರೀ ಪ್ರಭುಲಿಂಗ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಜರುಗಿದ ಜಯಂತ್ಯೋತ್ಸವದ ಮೆರವಣಿಗೆಯು ಸಮಾಜದ ಸಕಲ ಭಕ್ತಾಧಿಗಳು, ಸಮಾಳ, ಭಜನೆ, ವಾದ್ಯ ಮೇಳಗಳೊಂದಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ಅಧ್ಯಕ್ಷ ನಾಗರಾಜ ಅಗಡಿ, ಉಪಾಧ್ಯಕ್ಷ ಹನು ಮಂತಪ್ಪ ಮುಕ್ತೇನಹಳ್ಳಿ ಮತ್ತು ಕೆ.ಕೆ. ಹಳ್ಳಿ, ಶಂಕ್ರಪ್ಪ ಗರಡಿಮನಿ, ಲಕ್ಷ್ಮಣ ಕಡ್ಲಿಬಾಳ, ಪ್ರವೀಣ ಗುತ್ತೂರ, ಹನುಮಂತಪ್ಪ ಸುಂಕಾಪುರ, ರೇಖಪ್ಪ ಕಡ್ಲಿಬಾಳ, ಮಾರುತಿ ಗರಡಿಮನಿ, ಬಸವರಾಜ ಐರಣಿ, ರವಿ ಕಿಚಡಿ, ಕುಮಾರ ರಂಗನವರ, ನೀಲಪ್ಪ ಕುಮಾರಪ್ಪ ವರ, ಎಲ್ಲಪ್ಪ ಗುತ್ತಲ, ನಾಗರಾಜ ದೇವರಡ್ಡಿ, ವೆಂಕಟೇಶ ಪೆನಗೊಂಡಲ, ಬೆನಕೇಶ ಹದಡಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ಪ್ರಶಾಂತ ದಾಸರ, ಅಜಯ ಹುಲ್ಲತ್ತಿ, ರಾಜು ಕಡ್ಲಿಬಾಳ, ಗಣೇಶ ಹುಲ್ಲತ್ತಿ, ಪಾಂಡಪ್ಪ ವಗ್ಗಾ ಈಶ್ವರ ಗುಂಡೇರ, ಕಾಳಪ್ಪ ಕಿಚಡಿ, ಹರಿಹರದ ರಂಗಪ್ಪ, ರೇವಣಸಿದ್ದಪ್ಪ ಗುತ್ತೂರ, ಶೇಖಪ್ಪ ಗೋರಂಟ್ಲಿ ಮತ್ತಿತರರು ಜಯಂತ್ಯೋತ್ಸವದಲ್ಲಿ ಭಾಗವಹಿಸಿದ್ದರು.