ರೈತರಿಂದ ಜೆಸ್ಕಾಂಗೆ ಮನವಿ

ರೈತರಿಂದ ಜೆಸ್ಕಾಂಗೆ ಮನವಿ

ಹೂವಿನಹಡಗಲಿ, ಫೆ. 23- ರಾತ್ರಿ ಸಮಯದಲ್ಲಿ ವಿದ್ಯುತ್ ಸಂಪರ್ಕ ನಿಲ್ಲಿಸಿ, ಬೆಳಿಗ್ಗೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಬೇಕೆಂದು ಇಲ್ಲಿನ ಜೆಸ್ಕಾಂ ಇಲಾಖೆಗೆ ನಾಗತಿಬಸಾಪುರ ವ್ಯಾಪ್ತಿಯ ರೈತರ ಪರವಾಗಿ ಮನವಿ ಸಲ್ಲಿಸಿದ ಮನವಿಗೆ, ಜೆಸ್ಕಾಂ ಎಇಇ ಭಾಸ್ಕರ್ ಅವರು ಒಂದು ವಾರದಲ್ಲಿ ರೈತರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.