ಮಹಿಳೆಯ ಕೊಲೆ: ಆರೋಪಿಗೆ ಜೀವಾವಧಿ

ದಾವಣಗೆರೆ, ಫೆ.23- ಹಣಕಾಸಿನ ವಿಚಾರವಾಗಿ ಮಹಿಳೆಯನ್ನು ಕೊಲೆಗೈದಿದ್ದ ಆರೋಪಿತನಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಇಂದು ತೀರ್ಪು ನೀಡಿದೆ.

ತಾಲ್ಲೂಕಿನ ಹುಣಸೇಕಟ್ಟಿ ಗ್ರಾಮದ ನಾಗರಾಜ ಶಿಕ್ಷೆಗೆ ಗುರಿಯಾದ ಆರೋಪಿ. 

 ಅಕ್ಟೋಬರ್ 19, 2017ರಂದು ಹುಣಸೇಕಟ್ಟಿ ಗ್ರಾಮದ ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಆರೋಪಿ ನಾಗರಾಜ ಹಣದ ವಿಚಾರದಲ್ಲಿ ಗಲಾಟೆ ಮಾಡಿ ಸುಧಾ ಎಂಬಾಕೆಗೆ ಹೊಡೆದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತಳ ಸಹೋದರ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರಿನ ಶ್ರೀನಿವಾಸ ದೂರು ದಾಖಲಿಸಿದ್ದರು. 

ಗ್ರಾಮಾಂತರ ವೃತ್ತದ ಹೆಚ್. ಗುರುಬಸವರಾಜ್ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಿ ತನ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದರು. ನ್ಯಾಯಾ ಲಯದಲ್ಲಿ ವಿಚಾರಣೆ ನಡೆದು ಆರೋಪಿತನಿಗೆ ನ್ಯಾಯಾ ಧೀಶ ಕೆಂಗಬಾಲಯ್ಯ ಅವರು ಆರೋಪಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡದ ಹಣವನ್ನು ಮೃತಳ ಮಗಳಿಗೆ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆಂಚಪ್ಪ ವಾದ ಮಂಡಿಸಿದ್ದಾರೆ.