ಹರಪನಹಳ್ಳಿಯಲ್ಲಿ ಅದ್ಧೂರಿ ಸೇವಾಲಾಲ್ ಜಯಂತಿ

ಹರಪನಹಳ್ಳಿಯಲ್ಲಿ ಅದ್ಧೂರಿ ಸೇವಾಲಾಲ್ ಜಯಂತಿ

ಹರಪನಹಳ್ಳಿ, ಫೆ.20- ಪಟ್ಟಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತೋತ್ಸವನ್ನು ತಾಲ್ಲೂಕಿನ ಬಂಜಾರ್ ಸಮಾಜದಿಂದ ಆಚರಿಸಲಾಯಿತು.  

ಬಂಜಾರ್ ಸಮಾಜದ ಯುವಕರು ಹರ್ಷದಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವವನ್ನು ಹರಿಹರ ವೃತ್ತದಿಂದ ಅದ್ಧೂರಿ ಮೆರವಣಿಗೆಯ ಮೂಲಕ ಇಜಾರಿ ಶಿರಸಪ್ಪ ವೃತ್ತದ ಮಾರ್ಗವಾಗಿ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ದೇವಸ್ಥಾನಕ್ಕೆ ತಲುಪಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಮಾಜದ ಏಳಿಗೆಗಾಗಿ ಎಲ್ಲರೂ ಪಕ್ಷಾತೀತವಾಗಿ ಸಮಾಜದ ಕಾರ್ಯಕ್ರಮವನ್ನು ಒಗ್ಗಟ್ಟಾಗಿ ಆಚರಣೆ ಮಾಡಿದರೆ ಸಂತೋಷ. ಮುಂದಿನ ದಿನಗಳಲ್ಲಿ ಸಮಾಜದ ಪಕ್ಷಾತೀತವಾಗಿ ಒಗ್ಗೂಡಿಸಿ  ತಾಲ್ಲೂಕಿನಲ್ಲಿ ಬಂಜಾರ್ ಸಮುದಾಯವನ್ನು ಬಲಪಡಿಸಬೇಕಾಗಿದೆ ಎಂದು ಬಂಜಾರ್ ಸಮಾಜದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಂಜಾರ್ ಸಮಾಜದ ಮುಖಂಡರಾದ ಎಂ.ಪಿ. ನಾಯ್ಕ್, ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕ ಪಿ.ಎಲ್. ಪೋಮ್ಯಾನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಎಸ್.ಪಿ.ಲಿಂಬ್ಯಾನಾಯ್ಕ್,  ಇಂಜಿನಿಯರ್ ಕುಭೇಂದ್ರ ನಾಯ್ಕ್, ಪ್ರಕಾಶ್ ನಾಯ್ಕ್‍, ಮುಖಂಡ ಬಿ.ವೈ, ವೆಂಕೇಶ್ ನಾಯ್ಕ, ಗುತ್ತಿಗೆದಾರ ಉಮೇಶ್ ನಾಯ್ಕ, ರವಿನಾಯ್ಕ್, ಗೋಪಿ ನಾಯ್ಕ್‍, ಧರ್ಮನಾಯ್ಕ್, ಮಹಾಂತೇಶ್ ನಾಯ್ಕ್, ಬಸವರಾಜ್ ನಾಯ್ಕ್, ಕೊಟ್ರೇಶ್ ನಾಯ್ಕ, ವೆಂಕಟೇಶ್ ನಾಯ್ಕ, ಶಿಕ್ಷಕರಾದ ಕೃಷ್ಣನಾಯ್ಕ್, ಶಿವಾಜಿನಾಯ್ಕ್, ಭಜನ್ಯ ನಾಯ್ಕ್, ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ವಾಸುದೇವ ನಾಯ್ಕ, ಧನರಾಜ್ ನಾಯ್ಕ, ಕೊಟ್ರೇಶ್, ಶಿವಕುಮಾರ್ ನಾಯ್ಕ ಹಾಗೂ ಇತರರು ಇದ್ದರು.