ಜೆಡಿಎಸ್ ವೀಕ್ಷಕರ ಆಯ್ಕೆ

ದಾವಣಗೆರೆ, ಫೆ.13 – ಜೆಡಿಎಸ್ ಜಿಲ್ಲಾ ವೀಕ್ಷಕರಾಗಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೆ. ಅಮಾನುಲ್ಲಾ ಖಾನ್, ಹೊದಿಗೆರೆ ರಮೇಶ್ ನೇಮಕಗೊಂಡಿದ್ದಾರೆ.

ಜೆಡಿಎಸ್ ಅನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಮುಂದಿನ ಚುನಾವಣೆಗೆ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು  ರಾಜ್ಯ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ಮೈಸೂರು ಮತ್ತು ಬೆಂಗಳೂರು ವಿಭಾಗದ ಜಿಲ್ಲೆಗಳಾದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಸಂಬಂಧಿಸಿದಂತೆ 16 ಜನ ವೀಕ್ಷಕರನ್ನು ನೇಮಕ ಮಾಡಿ ಆದೇಶಿಸ ಲಾಗಿದೆ ಎಂದು ಅಮಾನುಲ್ಲಾ ಖಾನ್ ತಿಳಿಸಿದ್ದಾರೆ.