ಕೃಷಿ ಕಾಯ್ದೆ ವಿರೋಧಿಸಿ ಪಾದಯಾತ್ರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕೃಷಿ ಕಾಯ್ದೆ ವಿರೋಧಿಸಿ ಪಾದಯಾತ್ರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿಯಲ್ಲಿ ಕಾಂಗ್ರೆಸ್ ನಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ

ಹರಪನಹಳ್ಳಿ, ಫೆ.13- ರೈತರಿಗೆ ಮಾರಕವಾ ಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿ ಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದು ಪಡಿ ಹಿಂಪಡೆಯಬೇಕು. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‍ಎಸ್‍ಯುಐ, ರವಿ ಯುವ ಶಕ್ತಿಪಡೆ  ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳ ವತಿಯಿಂದ ಪಟ್ಟಣದ ಎಪಿಎಂಸಿ ಯಿಂದ ಪ್ರಮುಖ ರಸ್ತೆಗಳಲ್ಲಿ  ಪಾದಯಾತ್ರೆ ನಡೆಸಿ, ಹರಿಹರ-ಹೊಸಪೇಟೆ ರಸ್ತೆ ಬಂದ್ ಮಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ರೈತರು ಬೆಳೆಯುವ ಫಸಲನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಬೇಕು. ಅದನ್ನು ಖರೀದಿ ಮಾಡುವ ವ್ಯಾಪಾರಿಗಳು, ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು ರೈತರು ಬೆಳೆದ ಮಾಲನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶವಿತ್ತು. ಜೊತೆಗೆ 2017ರ ಮಾದರಿ ಕಾಯಿದೆಯ ಪ್ರಕಾರ ಆನ್‍ಲೈನ್ ಮೂಲಕ ಟೆಂಡರ್ ಖರೀದಿದಾರರು ಭಾಗವಹಿಸಲು ಅವಕಾಶವಿತ್ತು. ಈಗ ಇದೇ ಕಾಯಿದೆಯ 8ನೇ ಕಲಂಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು. 

 ಪ್ರತಿಭಟನೆಯಲ್ಲಿ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಪ್ರಕಾಶ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚಿಗಟೇರಿ ಬಸವನಗೌಡ, ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಬಾಗಳಿ ಗ್ರಾ.ಪಂ. ಅಧ್ಯಕ್ಷ ಕೋಡಿಹಳ್ಳಿ ಹನುಮಂತಪ್ಪ, ಕಬಡಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನುಷ್ಕಾ ಮಂಜುನಾಥ, ಕೆ.ಕಲ್ಲಹಳ್ಳಿ ಗ್ರಾ. ಪಂ. ಅಧ್ಯಕ್ಷ ತಿಮ್ಮಪ್ಪ, ಅಡವಿಹಳ್ಳಿ ಗ್ರಾ. ಪಂ. ಅಧ್ಯಕ್ಷ ಫಕ್ಕೀರಪ್ಪ, ನಿಚ್ಚವ್ವನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಕೆ.ಆನಂದ್, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಸ್ವಿಹಳ್ಳಿ ನಾಗರಾಜ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಜಗದೀಶ್, ಮುಖಂಡರಾದ ಕೆ.ಕಲ್ಲಹಳ್ಳಿ ಗೋಣ್ಯೆಪ್ಪ, ಮಟ್ಟೇರ ಮುತ್ತಣ್ಣ, ಕಂಚಿಕೇರಿ ಪಿ.ಜಯಲಕ್ಷ್ಮಿ, ಕುಂಚೂರು ಇಬ್ರಾಹಿಂ, ಕಲಾಭಾರತಿ ರಿಯಾಜ್, ಕಾನಹಳ್ಳಿ ರುದ್ರಪ್ಪ, ಭಾಗ್ಯಮ್ಮ ಮಲ್ಲಿಕಾರ್ಜುನ್, ಭಂಗಿ ಮಲ್ಲಿಕಾರ್ಜುನ, ಶೃಂಗಾರದೋಟ ಬಸವರಾಜ್, ಎಂ.ವಿ.ಕೃಷ್ಣಕಾಂತ್, ಪೂಜಾರ ರಾಜು, ರಾಯದುರ್ಗ ವಾಗೀಶ್, ಕಂಚಿಕೇರಿ ಕೆಂಚಪ್ಪ, ಎನ್.ಟಿ.ರತ್ನಮ್ಮ ಸೋಮಪ್ಪ, ಕುಂಚೂರು ಅಂಜಿನಪ್ಪ, ಕವಿತಾ ಸುರೇಶ್, ಕುಂಚೂರು ಶಫೀವುಲ್ಲಾ, ಯಡಿಹಳ್ಳಿ ರಾಜಶೇಖರ್, ಜಗದೀಶ್, ಪ್ರಸಾದ ಕವಾಡಿ, ಬಳಿಗನೂರು ವಿಜಯಕುಮಾರ್, ಸಿದ್ದನಗೌಡ, ತೆಲಿಗಿ ಪೂಜಾರ್ ಬಸವರಾಜ್, ಕೃಷ್ಣನಾಯ್ಕ, ಪೂರ್ಯನಾಯ್ಕ, ಗುಂಡಗತ್ತಿ ನೇತ್ರಾವತಿ, ಉಮಾಮಹೇಶ್ವರಿ, ಆನಂದ್, ಮಡಿವಾಳ ನಿಂಗಪ್ಪ,  ಜಟ್ಟಿ ಮಂಜುನಾಥ, ತೊಗರಿಕಟ್ಟೆ ದುರುಗಪ್ಪ ಮತ್ತಿತರರಿದ್ದರು.