ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ

ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ

ರಾಣೇಬೆನ್ನೂರು: ವಿದ್ಯಾರ್ಥಿಗಳಿಗೆ ಶಾಸಕ  ಅರುಣಕುಮಾರ ಪೂಜಾರ ಕರೆ

ರಾಣೇಬೆನ್ನೂರು, ಫೆ.11- ಪರೀಕ್ಷೆ ಗಳನ್ನು ಆತ್ಮವಿಶ್ವಾಸದೊಂದಿಗೆ ಎದುರಿ ಸಿದರೆ ಗೆಲುವು ಸಾಧ್ಯ ಎಂದು ಶಾಸಕ ಅರಣಕುಮಾರ ಪೂಜಾರ ಹೇಳಿದರು.

ಜೆಸಿ ಹಾಗೂ ಕಾಕಿ ಜನಸೇವಾ ಟ್ರಸ್ಟ್ ಜಂಟಿಯಾಗಿ ನಡೆಸುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವು ಇಂತಹ ತರಬೇತಿಗಳನ್ನು ನೀಡುತ್ತಾ ಬಂದಿದ್ದು,  ಕಾಕಿ ಟ್ರಸ್ಟ್ ಸಾಮಾಜಿಕ ಕಳಕಳಿಯಿಂದ ಈ ಸೇವಾ ಕಾರ್ಯವನ್ನು ಮಾಡುತ್ತಿರುವುದು  ಶ್ಲಾಘನೀಯ ಎಂದರು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಶಾಸಕರು ಕರೆ ನೀಡಿದರು.

ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಕಾಕಿ, ವೆಂಕಟೇಶ ಕಾಕಿ, ಹನುಮಂತಪ್ಪ ಕಾಕಿ, ಲಕ್ಷ್ಮಣ ಕಣಕಿ, ಶಿವಾನಂದ ಸಾಲಗೇರಿ, ಜೆಸಿ ಪದಾಧಿಕಾರಿಗಳಾದ ಪಿ.ಆರ್. ಪಾಟೀಲ, ಡಾ. ಶಿವಾನಂದ ಹಿತ್ತಲಮನಿ, ಪ್ರಕಾಶ ಗಚ್ಚಿನಮಠ, ಪರಬು ಹಲಗೇರಿ ಇನ್ನಿತರರಿದ್ದರು. ಮೃತ್ಯುಂಜಯ  ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.