ಹರಪನಹಳ್ಳಿ ತಾ|| 9 ಗ್ರಾ.ಪಂ.ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಹರಪನಹಳ್ಳಿ ತಾ|| 9 ಗ್ರಾ.ಪಂ.ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಹರಪನಹಳ್ಳಿ, ಫೆ.5 – ತಾಲ್ಲೂಕಿನಲ್ಲಿ 9 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಯ್ಕೆ ಪ್ರಕ್ರಿಯೆ ಶುಕ್ರವಾರ ನಡೆ ಯಿತು. ಗುಂಡಗತ್ತಿ, ನೀಲಗುಂದ, ತೊಗರಿಕಟ್ಟಿ, ಮಾಡ್ಲಿಗೇರಿ, ಪುಣಭಗಟ್ಟಿ, ಮೈದೂರು, ನಿಚ್ಚವ್ವನಹಳ್ಳಿ, ಹಿರೇಮೆಗಳಗೇರಿ, ಹಲು ವಾಗಲು ಗ್ರಾಪಂಗಳಿಗೆ ಚುನಾವಣೆ ನಡೆಯಿತು.

14 ಸದಸ್ಯರಿದ್ದ  ನಿಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗಂಗಿಬಾಯಿ ದೊಡ್ಡಮನಿ, ಉಪಾಧ್ಯಕ್ಷರಾಗಿ ನ್ಯಾಯವಾದಿ ಕಾಂಗ್ರೆಸ್ ಬೆಂಬಲಿತ ಕಂಚಿಕೇರಿ ಆನಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ. ಪರಶುರಾಮಪ್ಪ,  ಚೀಗಟೇರಿ ಯುವ ಕಾಂಗ್ರೆಸ್ ಅಧ್ಯಕ್ಷ  ಶಿವರಾಜ್‍, ಮುಖಂಡರಾದ ಮಂಜುನಾಥ, ಬಸಾಪುರದ, ಮಂಜುನಾಥ, ವೃಷಬೇಂದ್ರಪ್ಪ, ಶಿರಾಜ್, ಸೋಮನಾಥ ಪಟೇಲ್, ಪಿ.ಪರುಶುರಾಮ,  ಸನಾವುಲ್ಲಾ, ವಿರೂಪಾಕ್ಷಪ್ಪ, ಪಿ.ಡಿ.ಓ.ಮುಕ್ತರ್ ಆಲಿ ಸೇರಿದಂತೆ ಇತರರು ಇದ್ದರು ಚುನಾವಣೆ ಅಧಿಕಾರಿಯಾಗಿ ಆನಂದ ಡೊಳ್ಳಿನ ಕಾರ್ಯ ನಿರ್ವಹಿಸಿದರು.

ಒಟ್ಟು 12 ಸದಸ್ಯರಿದ್ದ ಗುಂಡಗತ್ತಿ ಗ್ರಾ ಪಂ ಗೆ ಸಿಪಿಇಡಿ ಪದವೀಧರ ಕೆ.ಪ್ರಕಾಶ ಅಧ್ಯಕ್ಷರಾಗಿ, ಉಪಾದ್ಯಕ್ಷರಾಗಿ ಮಂಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಪಂ ಕಾಂಗ್ರೆಸ್ ಬೆಂಬ ಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. 

ಈ ಸಂದರ್ಭದಲ್ಲಿ ಎಂ.ಪಿ. ಪ್ರಕಾಶ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷರಾದ ಎಂ.ಪಿ. ವೀಣಾ ಮಹಾಂತೇಶ  ಚರಂತಿ ಮಠ್, ಕೊಟ್ರೇಶ, ವೈ. ರಾಜಪ್ಪ ಕೆಂಚಪ್ಪ, ಸೇರಿದಂತೆ ಇತರರು ಇದ್ದರು.