ಆಯುರ್ವೇದಕ್ಕೆ ಅಭೂತಪೂರ್ವ ಭವಿಷ್ಯ : ಶ್ರೀ ತ್ಯಾಗೀಶ್ವರಾನಂದಜೀ

ಆಯುರ್ವೇದಕ್ಕೆ ಅಭೂತಪೂರ್ವ ಭವಿಷ್ಯ : ಶ್ರೀ ತ್ಯಾಗೀಶ್ವರಾನಂದಜೀ

ದಾವಣಗೆರೆ, ಫೆ.3- ನಗರದ ಅಶ್ವಿನಿ ಆಯುರ್ವೇದ ಮೆಡಿಕಲ್‌ ಕಾಲೇಜಿನಲ್ಲಿ ಔಷಧಿ ಸಸ್ಯಗಳ ನೆಡುವಿಕೆ ಕಾರ್ಯಕ್ರಮವು ನಿನ್ನೆ ನಡೆಯಿತು.

ಮುಖ್ಯ ಅತಿಥಿಗಳಾಗಿ ರಾಮಕೃಷ್ಣಾಶ್ರಮದ ಶ್ರೀ ತ್ಯಾಗೀಶ್ವರಾನಂದಜೀ   ಸಸಿಗಳನ್ನು ನೆಡುವುದರ ಮೂಲಕ ಸಾಂಕೇತಿಕವಾಗಿ ಅಶ್ವಿನಿ ವನದ ಔಷಧಿ ವನದ ಉದ್ಘಾಟನೆ ನೆರವೇರಿಸಿದರು. ಬಾತಿ ಗ್ರಾಪಂ ಸದಸ್ಯರಾದ ಹನುಮಂತಪ್ಪ, ಉಮೇಶ್‌ ಅತಿಥಿಗಳಾಗಿ ಆಗಮಿಸಿದ್ದರು. ಆಯುರ್ವೇದ ಕಾಲೇಜಿನ ಡಾ. ಮೃತ್ಯುಂಜಯ ಎನ್‌. ಹಿರೇಮಠ್ ಅಧ್ಯಕ್ಷತೆ ವಹಿಸಿದ್ದರು. ಡಾ. ಎಲ್‌.ಎಂ. ಜ್ಞಾನೇಶ್ವರ್‌, ಆಯುರ್ವೇದ ಆಸ್ಪತ್ರೆಯ ಛೇರ್ಮನ್‌ ಡಾ.ಎನ್.ಆರ್‌ ಶಂಕರನಾರಾಯಣ ಉಪಸ್ಥಿತರಿದ್ದರು. ಡಾ. ಹುಸೇನ್, ಡಾ. ದೀಪ್ತಿ, ಡಾ. ಅಕ್ಷತಾ,  ಡಾ. ಅನಿತ ಮತ್ತಿತರರು ಉಪಸ್ಥಿತರಿದ್ದರು.