ಹರಪನಹಳ್ಳಿ : ವೀರಶೈವ ಮಹಾಸಭಾ ಚುನಾವಣೆ ; 22 ನಾಮಪತ್ರಗಳು ಸಲ್ಲಿಕೆ

ಹರಪನಹಳ್ಳಿ : ವೀರಶೈವ ಮಹಾಸಭಾ ಚುನಾವಣೆ ; 22 ನಾಮಪತ್ರಗಳು ಸಲ್ಲಿಕೆ

ಹರಪನಹಳ್ಳಿ, ಫೆ.2- ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದು, ಮಂಗಳವಾರ ಈ ಪೈಕಿ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿವೆ. 

ಪಟ್ಟಣದ ಆರ್‌ಎಸ್‌ಎನ್ ಶಾಲೆ ಯಲ್ಲಿ  ಚುನಾವಣಾಧಿಕಾರಿ ಸಿ.ಎಂ.ಕೊಟ್ರಯ್ಯ ಅವರು ನಾಮಪತ್ರಗಳನ್ನು ಸ್ವೀಕರಿಸಿ ಮಾತ ನಾಡಿ, ಇಂದಿನ ನಾಮಪತ್ರ ಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ 1, ಕಾರ್ಯಕಾರಿ ಸಮಿತಿಗೆ 14 ಪುರುಷರು, 7 ಮಹಿಳೆಯರು ಸೇರಿ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿವೆ. ಫೆ.3 ರಂದು ನಾಮಪತ್ರಗಳ ಪರೀಶೀಲನೆಯಾಗಲಿದ್ದು, ಫೆ.6 ನಾಮಪತ್ರ ವಾಪಸ್ ಪಡೆಯುವುದು ಹಾಗೂ ಫೆ.14 ರಂದು  ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂ. ರಾಜಶೇಖರ, ಟಿ.ಎಚ್.ಎಂ. ಮಲ್ಲಿಕಾರ್ಜುನ, ಮಟ್ಟಿ ಮೃತ್ಯುಂಜಯ, ಎಚ್. ಮಲ್ಲಿಕಾರ್ಜುನ, ಕಾನಹಳ್ಳಿ ರುದ್ರಪ್ಪ, ಎಂ.ಟಿ. ಬಸವನಗೌಡ, ಎಂ. ಅಜ್ಜಣ್ಣ, ಅಂಬ್ಲಿ ಮಂಜುನಾಥ, ಕೆ.ಎಂ. ಗುರುಸಿದ್ದಯ್ಯ, ಬಸವರಾಜ, ಪ್ರಕಾಶಗೌಡ, ಪುಷ್ಪ ದಿವಾಕರ, ಅಕ್ಕಮಹಾದೇವಿ, ಪ್ರಭಾ ಅಜ್ಜಣ್ಣ, ಮಂಜುಳಾ, ಎಂ. ಶೋಭ ಚಂದ್ರಶೇಖರ, ಉಮಾದೇವಿ, ವೀಣಾ, ಪದ್ಮಾವತಿ, ಉಪಸ್ಥಿತರಿದ್ದರು.