ಶಾಲೆಗಳಿಗೆ ಭೇಟಿ ನೀಡಿದ ತರಳಬಾಳು ಜಗದ್ಗುರುಗಳು

ಶಾಲೆಗಳಿಗೆ ಭೇಟಿ ನೀಡಿದ ತರಳಬಾಳು ಜಗದ್ಗುರುಗಳು

ಸಿರಿಗೆರೆ, ಫೆ.1- ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರ ತರಳಬಾಳು ವಿದ್ಯಾ ಸಂಸ್ಥೆಯ ಶಾಲೆಗಳಿಗೆ ಭೇಟಿ ನೀಡಿ ಶಾಲಾ ನಿರ್ವಹಣೆಯ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. 

ಮಕ್ಕಳಿಗೆ  ಶಿಕ್ಷಕರು ಮತ್ತು  ಸಿಬ್ಬಂದಿ ವರ್ಗದವರು  ಕೊರೊನಾ ಕಾರಣದಿಂದ ಕೈಗೊಂಡಿರುವ  ಮಾರ್ಗಸೂಚಿಯ ನಿಯಮಗಳನ್ನು ಮನವರಿಕೆ ಮಾಡಿಕೊಡುವಂತೆ ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಹೊಸ ವರ್ಷದ ದಿನವೇ ಆರಂಭವಾಗಿದ್ದು, ಮಕ್ಕಳು ಲವಲವಿಕೆಯಿಂದಲೇ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.