ಭಾರತವಿದು `ಸಾರ್ವಭೌಮ ಗಣರಾಜ್ಯ’

ಭಾರತವಿದು  `ಸಾರ್ವಭೌಮ ಗಣರಾಜ್ಯ’

ಭಾರತ ನಮ್ಮದು `ಸಾರ್ವಭೌಮ ಗಣರಾಜ್ಯ’
ಹಕ್ಕು ಬಾಧ್ಯತೆಗಳ ಬಗೆಗೆ `ನಮ್ಮಲ್ಲಿಲ್ಲ ವ್ಯಾಜ್ಯ’
ಎಲ್ಲದನೂ ಸ್ಪಷ್ಟವಾಗಿ ಹೇಳಿದೆ ಸಂವಿಧಾನ
ಇದರ ರಚನೆಯಲ್ಲಿ ನಾವು ಮಾಡಲಿಲ್ಲ ನಿಧಾನ.

ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ
ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ,
ನಮ್ಮ ಸಂವಿಧಾನವಿದು ಜಗತ್ತಲಿ ಸರ್ವ ಶ್ರೇಷ್ಠ
ಇದರಲ್ಲಿನ ವಿಧಿ, ಪರಿಚ್ಛೇದಗಳೆಲ್ಲವೂ ಉತ್ಕೃಷ್ಠ

`ಜಾತ್ಯತೀತವು’ ನಮ್ಮ ದೇಶ `ಪೂರ್ಣ ಸ್ವತಂತ್ರ’
ನಿಜವಾಗಿದೆ ಇಲ್ಲಿ ಸರ್ವ ಸಮಾನತೆ ಮಂತ್ರ,
`ಪ್ರಜಾಸತ್ತಾತ್ಮಕ ಗಣರಾಜ್ಯ’ವಿಲ್ಲಿ ಸಾಕಾರ
ಜನರಿಂದಾಯ್ಕೆಗೊಂಡವರಿಂದಲೇ ಸರ್ಕಾರ.

ಬೃಹತ್ ಆರ್ಥಿಕ ಶಕ್ತಿಯಾಗಿ ಹೊಮ್ಮಬೇಕಿದೆ ದೇಶ
ಇದರಲ್ಲಿದೆ ಯುವ ಜನತೆಗೆ ಮಹದವಕಾಶ
ರಾಷ್ಟ್ರ ರಕ್ಷಣೆಗೆ ಅಸುನೀಗಿದ ಯೋಧರು ಅಮರ
ಹೃದಯ ತುಂಬಿ ಹೇಳುವ `ಭಾರತ ಮಾತೆಗೆ ಜಯಕಾರ’


ಹೆಚ್.ಬಿ.ಮಂಜುನಾಥ
ಹಿರಿಯ ಪತ್ರಕರ್ತ