ಕಲ್ಲಿಗೆ ಜೀವ…

ಕಲ್ಲಿಗೆ ಜೀವ…

ಕಸುರ ಕಚ್ಚಿ ಬಿಸುಟಿ
ಊರಿಯುತ್ತಿದೆ
ಅವ್ವನ ತಾಳಿಕೆಯಲಿ
ಮಿದ್ದಿದೆ ತಳಕ್ಕೆ
ಅಲೆ ಸುಳಿದಾಡುತ್ತಿದೆ.

ತುಂಡು ಮಾಂಸವ
ಹರಿದು ಅಂಗುಲಮಾಡಲು
ಅವಳು ಬೇಡವಾಗಿಹಳು ಈ ಜೀವಕೆ
ಹಸಿದ ಹೊಟ್ಟೆಗೆ ತಾಯಿ ಬಯಸಲು.

ತನುವಿನ ಎಲೆಯೊಳಗೆ
ಹಸಿರುಟ್ಟ ತಾಯಿ
ಉಣಿಸುತ್ತಾಳೆ ಗಳಿಗೆ ಎಂಬಂತೆ
ಕ್ಷಣಕೆ ಕಾಯಲು.

ಮನಸ್ಸಿಗೆ ಬಂದಂತೆ
ಉಸಿರ ಬದಿಯಲ್ಲಿ
ಸೆಳೆವಿದೆ ಸಮತಟ್ಟು ಮಾಡಿ
ಮೂರುದಿಕ್ಕುಗಳಲಿ ಅಡಗಿಸಿದ
ನಾಮಗಲ್ಲು.

ಕವಚ ಹೊದಿಕೆ ಮಹಾಯಾನದ
ಸೇವೆ ಕಾಣಸಿಗಲು ಹಣೆಯಲಿ
ನಾಮಜಗದ ಹುಡುಕಾಟ
ದೀಪ ಉರಿಯುವವರೆಗೂ ಕಲ್ಲಿಗೆ
ಜೀವವಿಲ್ಲ ನಾವೇ ಜೀವವಾಗಬೇಕು.


ಪ್ರವೀಣ್ ಬಿ.ಎಂ.
ಪಡುವಾರಹಳ್ಳಿ, ಮೈಸೂರು- ಪ್ರವೀಣ್ ಬಿ.ಎಂ.
ಪಡುವಾರಹಳ್ಳಿ, ಮೈಸೂರು