ಪ್ರಗತಿಗೆ ಬುನಾದಿಯಾಗಿರುವ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು

ಪ್ರಗತಿಗೆ ಬುನಾದಿಯಾಗಿರುವ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು

ಹರಪನಹಳ್ಳಿ : ಕುರುಬ ನೌಕರರ ಸಂಘದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಪರಶುರಾಮಪ್ಪ ಕರೆ

ಹರಪನಹಳ್ಳಿ, ಜ.10- ಶಿಕ್ಷಣ, ಎಲ್ಲಾ ಪ್ರಗತಿಗೆ ಭದ್ರಬುನಾದಿಯಾಗಿದ್ದು  ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು  ನೀಲಗುಂದ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲ್ಲೂಕು ಕುರುಬ ನೌಕರರ ಸಂಘದಿಂದ ನಿನ್ನೆ ಏರ್ಪಡಿಸಿದ್ದ ದಾಸ ಶ್ರೇಷ್ಠ ಭಕ್ತ ಕನಕದಾಸರ 533ನೇ ಜಯಂತ್ಯೋತ್ಸವ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೆ ಸಾಧನೆ ಸುಲಭವಾಗುತ್ತದೆ. ಪ್ರತಿಭೆಗ ಳನ್ನು ಹೊರಹಾಕಲು ಅಭ್ಯಾಸ ಮುಖ್ಯ. ಅದು ಪರಿಶ್ರಮದಿಂದ ದೊರಕಲಿದ್ದು, ಆ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು. ಕುರುಬ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನ ಸಾಗುತ್ತಿದ್ದು, ಶೀಘ್ರದಲ್ಲೇ ಮುಗಿಯುವ ಹಂತದ ಲ್ಲಿದ್ದು ಸರ್ಕಾರಕ್ಕೆ ವರದಿ ನೀಡಲಿದ್ದಾರೆ.  ಅದರ ಜೊತೆ ಎಸ್‍ಟಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲು ಹೋರಾಟ ಮಾಡಲಿದ್ದೇವೆ ಎಂದರು. 

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುರುಬ ಸಮಾಜ ಅತಿ ಹಿಂದುಳಿದಿದೆ. 

ಶೈಕ್ಷಣಿಕ ರಂಗದಲ್ಲಿ ಶೇ.40ರಷ್ಟು ಮಾತ್ರ ಅಕ್ಷರಸ್ಥರಿದ್ದಾರೆ. ಮುಖ್ಯವಾಹಿನಿಗೆ ಸಮಾಜ ದಾಪುಗಾಲು ಹಾಕಲು ಶಿಕ್ಷಣ ಅವಶ್ಯಕವಾಗಿದೆ. ನೈತಿಕ ಪರಿಶ್ರಮದಿಂದ ಸಮಾಜ ಬಾಂಧವರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ತೆಲಗಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ರಾದ ಶ್ರೀಮತಿ ಜಯಶೀಲಾ ಕೆ.ಆರ್. ಮಾತ ನಾಡಿ, ಸಮಾಜದ ಅಸಮಾನತೆ ಹೋಗಲಾಡಿ ಸಲು ದಾಸ ಸಾಹಿತ್ಯ ಸಹಾಯಕವಾಗಿದೆ. ದಾಸ ಸಾಹಿತ್ಯದ ವಚನಗಳಿಂದ ಕನಕದಾಸರು ಶ್ರೇಷ್ಠರು. ಅವರ ಆದರ್ಶ ತತ್ವಗಳನ್ನು ನಾವು ಅಳವಡಿಸಿ ಕೊಂಡು ಹಿಂದುಳಿದ ಪಟ್ಟವನ್ನು ಹೋಗಲಾಡಿಸ ಬೇಕು. ಸಮಾಜದ ಶಿಕ್ಷಣವಂತರು, ಅಧಿಕಾರಿಗಳು ಸಮಾಜದ ಋಣ ತೀರಿಸಲು ಸಹಾಯ, ಸಹಕಾರ ನೀಡಬೇಕು. ಪರಿಶಿಷ್ಟ ಪಂಗಡದ ಮೀಸಲಾತಿ ನಮ್ಮ ಹಕ್ಕು. ಎಲ್ಲಾ ರಂಗದಲ್ಲಿ ಪ್ರಗತಿ ಸಾಧಿಸಲು ಮೀಸಲಾತಿ ಅವಶ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು.

ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ವೈ.ಕೆ.ಬಿ.ದುರುಗಪ್ಪ, ತಾಲ್ಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಕುರುಬ ಸಮಾಜದ ಕಾರ್ಯದರ್ಶಿ ಸಾಬಳ್ಳಿ ಜಂಬಣ್ಣ, ಪುರಸಭೆ ಸದಸ್ಯ ಜೋಗಿನ ಭರತೇಶ್, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮರಾಜ ಜೈನ್, ದಾದಾ ಖಲಂದರ್, ಮುಖಂಡರಾದ ಬಿ.ತಿಮ್ಮಪ್ಪ, ದುರುಗಪ್ಪ ಹೊನ್ನೂರು, ವೆಂಕಟೇಶ್ ಬಾಗಲಾರ್, ವಕೀಲರುಗಳಾದ ಮೈದೂರು ಮಲ್ಲಿಕಾರ್ಜುನ, ಬಂಡ್ರಿ ಗೋಣಿಬಸಪ್ಪ, ಹುಚ್ಚಪ್ಪ, ಅಂಜಿನಪ್ಪ ಕಮತರ್, ಚೆನ್ನಪ್ಪ ಕಂಬಳಿ, ಗಣೇಶಪ್ಪ, ಎಸ್.ಪಂಪಾಪತಿ ಕಾಮತೇಶ್, ಮಲ್ಲಪ್ಪ, ಮಲ್ಲಿಕಾರ್ಜುನ ಹಾಗೂ ಇತರರು ಭಾಗವಹಿಸಿದ್ದರು.