ಜಕಣಾಚಾರಿ ಜನ್ಮದಿನಾಚರಣೆ

ಜಕಣಾಚಾರಿ ಜನ್ಮದಿನಾಚರಣೆ

ಕೊಟ್ಟೂರು, ಜ.2 – ಕನ್ನಡ ನಾಡಿನಲ್ಲಿನ ದೇವಾಲಯಗಳನ್ನು ಶಿಲ್ಪ ಕಲೆಯಿಂದ ವಿಶ್ವ ಪ್ರಖ್ಯಾತಗೊಳಿಸಿದ ಕೀರ್ತಿ ಜಕಣಾಚಾರಿಯವರಿಗೆ ಸಲ್ಲುತ್ತದೆ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದ್ದಾರೆ.

ತಾಲ್ಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ನಡೆದ ಅಮರ ಶಿಲ್ಪಿ ಜಕಣಾಚಾರಿಯವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಬೇಲೂರು, ಹಳೇಬೀಡು ಸೇರಿದಂತೆ ರಾಜ್ಯಾದ್ಯಂತ ಇರುವ ದೇವಾಲಯಗಳಲ್ಲಿ ತಮ್ಮ ಅವಿರತ ಶ್ರಮದಿಂದ ನಿರ್ಮಿಸಿದ ಶಿಲ್ಪಕಲೆಗಳಿಂದ ಕರ್ನಾಟಕ ವಿಶ್ವವಿಖ್ಯಾತವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳುವುದು ಅವಶ್ಯವಿದೆ ಎಂದರು.

ಮೌನೇಶ ಆಚಾರ್ ಉಪನ್ಯಾಸ ನೀಡಿದರು.

ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೊಟ್ರೇಶ ಆಚಾರ್ ಮಾತನಾಡಿ, ನಮ್ಮ ಸಮಾಜದವರು ಜಕಣಾಚಾರಿಯಂತೆ ಕಲೆಯನ್ನು ಮೈಗೂಡಿಸಿಕೊಂಡು ಮುಂದುವರೆಯಬೇಕು. ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆದು ಆಧುನಿಕ ಪರಿಕರಗಳನ್ನು ಬಳಸಿ ವೃತ್ತಿಯಲ್ಲಿ ನವೀಕರಣ ಮಾಡಿಕೊಳ್ಳಬೇಕಾಗಿದೆ ಎಂದರು.

ಸುಧಾಚಾರ್, ಕಾಳಾಚಾರ್, ಮಹಬಲೇಶ್ವರ ಆಚಾರ್, ಚಂದ್ರಾಚಾರಿ, ಗುರುಬಸವರಾಜ ಆಚಾರ್, ಬಸವರಾಜ ಆಚಾರ್, ವಿಶ್ವನಾಥ ಆಚಾರ್ , ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಶಿರಸ್ತೇದಾರ್ ಲೀಲಾ ಎಸ್., ಕಂದಾಯ ನಿರೀಕ್ಷಕ ಹಾಲಸ್ವಾಮಿ, ಗ್ರಾಮ ಲೆಕ್ಕಿಗ ಶಿವಕುಮಾರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ರವಿ ಹರಪನಹಳ್ಳಿ ಸ್ವಾಗತಿಸಿದರು. ಸಿ.ಮ.ಗುರುಬಸವರಾಜ ನಿರೂಪಿಸಿದರು.