ಹೊನ್ನಾಳಿ ತಾ. ವ್ಯಾಪ್ತಿಗೆ ವಿಸ್ತರಿಸಿದ ಹಿರಿಯ ನಾಗರಿಕರ ಸಂಘ

ಹೊನ್ನಾಳಿ ತಾ. ವ್ಯಾಪ್ತಿಗೆ ವಿಸ್ತರಿಸಿದ ಹಿರಿಯ ನಾಗರಿಕರ ಸಂಘ

ಹೊನ್ನಾಳಿ, ಡಿ.26 –  ಪಟ್ಟಣಕ್ಕೆ ಸೀಮಿತ ವಾಗೊಂಡಿದ್ದ ಹಿರಿಯ ನಾಗರಿಕರ ಸಹಕಾರ ಸಂಘವನ್ನು ಇದೀಗ ತಾಲ್ಲೂಕು ವ್ಯಾಪ್ತಿಗೆ ವಿಸ್ತರಿ ಸುವ ಆಸಕ್ತಿ ಹೊಂದಿದೆ ಎಂದು ಸೊಸೈಟಿಯ ಅಧ್ಯಕ್ಷ ಬೆನಕನಹಳ್ಳಿ ಪಿ. ವೀರಪ್ಪ ಹೇಳಿದರು.

ಹೊನ್ನಾಳಿ ಪಟ್ಟಣದಲ್ಲಿ ನಿನ್ನೆ ನಡೆದ ಸಂಘದ ಐದನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು 219 ಹಿರಿಯ ನಾಗರಿಕ ಸದಸ್ಯರನ್ನು ಹೊಂದಿದ್ದು, ಇಂದು ಗೌಡರ ಬಸವರಾಜ್ ಪಾಟೀಲ್, ನಿವೃತ್ತ ಶಿಕ್ಷಕ ಚಿಕ್ಕಪ್ಪನವರು ಸ್ವಯಂ ಪ್ರೇರಣೆಯಿಂದ ಸದಸ್ಯತ್ವ ಪಡೆದಿರುವುದು  ಸಂಘಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ. ತಾಲ್ಲೂಕಿನ ಪ್ರತಿ ಹಳ್ಳಿಗೆ ಕನಿಷ್ಠ 25 ಸದಸ್ಯರನ್ನು ನೋಂದಣಿ ಮಾಡಿಸುವ ಆಸಕ್ತಿ ಹೊಂದಿ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.

ಕಾರ್ಯದರ್ಶಿ ಕೆ. ಎಸ್ ಸಿದ್ದಬಸಪ್ಪ ಮಾತನಾಡಿ, ಬಂಡವಾಳ 1 ಲಕ್ಷದ 74000 ಇದ್ದು. 2 ಲಕ್ಷ ಸಾಲ ನೀಡಿದ್ದು ವಸೂಲಾತಿ ಶೇ. 90ರಷ್ಟು ಇದೆ. ಡಿಸಿಸಿ ಬ್ಯಾಂಕ್‍ನಲ್ಲಿ ವಹಿವಾಟು ನಡೆಸುತ್ತಿದೆ ಎಂದರು.

ಲಾಯರ್ ಶಿವಯೋಗಾರಾಧ್ಯರು ಸಭೆಯನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಗುರುಮೂರ್ತಿ, ಸದಸ್ಯರಾದ ಎನ್ ಬಾಬು, ಅಂಬ್ಲಿ ನರಸಪ್ಪ, ಹೆಚ್ ನಾಗರಾಜಪ್ಪ, ಹೆಚ್.ಎಂ. ಚಂದ್ರಕುಮಾರ್, ಹೆಚ್.ಎನ್. ಚಂದ್ರಪ್ಪ, ಬಿ.ಹೆಚ್. ಚಂದ್ರಪ್ಪ ಗೌರಮ್ಮ, ಸುಶೀಲಮ್ಮ, ದೊಡ್ಡಹಾಲೇಶ್, ಸಿದ್ದಬಸಪ್ಪ ಹಾಗೂ ಇತರರು ಉಪಸ್ಥಿತರಿದ್ದರು.