ಹೊನ್ನಾಳಿ ಅರ್ಬನ್ ಕ್ರೆಡಿಟ್ ಸೊಸೈಟಿಯಿಂದ ಶೇ.12 ಡಿವಿಡೆಂಡ್

ಹೊನ್ನಾಳಿ ಅರ್ಬನ್ ಕ್ರೆಡಿಟ್ ಸೊಸೈಟಿಯಿಂದ ಶೇ.12 ಡಿವಿಡೆಂಡ್

ಹೊನ್ನಾಳಿ ಡಿ. 26 – ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 50 ಲಕ್ಷ ರೂ.ಗಳ ನಿವ್ವಳ ಲಾಭ ಹೊಂದಿದೆ. 12ರಷ್ಟು ಡಿವಿಡೆಂಡನ್ನು ಸದಸ್ಯರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಡಾ. ರಾಜಕುಮಾರ್ ಹೇಳಿದರು.

ಸಂಘದ 21 ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಯು ಒಂದು ಕುಟುಂಬದಂತೆ, ಸಾಲಗಾರರ ಕಾಳಜಿಯಂತೆ ಠೇವಣಿದಾರರ ರಕ್ಷಣೆ ಮಾಡುವುದರಿಂದ ಕೆಲವೊಂದು ಕಠಿಣ ನಿರ್ಧಾರಗಳ ಅನಿವಾರ್ಯತೆ ಇದೆ ಎಂದರು.

5379 ಸದಸ್ಯರನ್ನು ಹೊಂದಿದ್ದು, ಷೇರು ಬಂಡವಾಳ ಎರಡು ಕೋಟಿ 40 ಲಕ್ಷವಿದೆ. 25 ಕೋಟಿ ರೂ.ಗಳ ದುಡಿಯುವ ಬಂಡವಾಳವಿದ್ದು, ಸೊಸೈಟಿ `ಎ’ ಗ್ರೇಡ್ ನಲ್ಲಿದೆ. ನ್ಯಾಮತಿ ಶಾಖೆ ಕಟ್ಟಡಕ್ಕೆ ಮುಂದಾಗಿರುವುದಾಗಿ ಅವರು ಹೇಳಿದರು. 

ಸೊಸೈಟಿ ಉಪಾಧ್ಯಕ್ಷ ವೀರೇಶ್, ಸದಸ್ಯರುಗಳಾದ ಪ್ರಕಾಶ್, ಜೈ ರಾವ್, ಹನುಮಂತಪ್ಪ, ಶಿವಮೂರ್ತಿ, ರಾಜನಾಯ್ಕ, ಮೋಹನ್, ನಾಗರಾಜ್, ರವಿಕುಮಾರ್, ಉಮೇಶ್, ಪ್ರಸಾದ್, ರೂಪ, ನಾಗರತ್ನ, ಶಾಂತಲಾ, ಕಾರ್ಯ ದರ್ಶಿ ಕುಮಾರ್ ಮತ್ತಿತರರು ಇದ್ದರು.