ವೈದ್ಯಕೀಯಕ್ಕೆ ಹರಿಯಾಣದ ಸರ್ಕಾರಿ ‘ಕ್ಯಾಪಿಟೇಷನ್’

ವೈದ್ಯಕೀಯಕ್ಕೆ ಹರಿಯಾಣದ ಸರ್ಕಾರಿ ‘ಕ್ಯಾಪಿಟೇಷನ್’

ಇತರರಿಗೆ ಮುಕ್ತವೇ?

ಕೇವಲ ವೈದ್ಯಕೀಯ ವಿದ್ಯಾರ್ಥಿಗಳಷ್ಟೇ ಅಲ್ಲದೇ ಸರ್ಕಾರ ಇತರೆ ವಲಯಗಳ ವಿದ್ಯಾರ್ಥಿಗಳಿಗೆ §ಸಬ್ಸಿಡಿ’ಯಲ್ಲಿ ಶಿಕ್ಷಣ ನೀಡುತ್ತಿದೆ. ಸಮಾಜದ ಹಲವಾರು ಹಿಂದುಳಿದ ವರ್ಗಗಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಜೊತೆಗೆ, ಉಚಿತ ಸೌಲಭ್ಯಗಳನ್ನೂ ಕಲ್ಪಿಸುತ್ತಿದೆ.

ಹಾಗಾದರೆ ಅವರಿಂದ ಸರ್ಕಾರ ಏಕೆ ಬಾಂಡ್‌ಗಳನ್ನು ಪಡೆಯಬಾರದು, ಕೇವಲ ಸರ್ಕಾರಿ ವೈದ್ಯಕೀಯ ವಿದ್ಯಾರ್ಥಿಗಳಿಗಷ್ಟೇ ಏಕೆ ಈ ಬಾಂಡ್‌ ಬಂಧನ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ವ್ಯಕ್ತಿಯೋ, ಸಮಾಜವೋ?

ದುರ್ಬಲ ವರ್ಗಕ್ಕೆ ಸೇರಿದ ಪ್ರತಿಭಾವಂತರಿಗೆ ಸರ್ಕಾರ ಸಬ್ಸಿಡಿಯಲ್ಲಿ ಇಲ್ಲವೇ ಉಚಿತವಾಗಿ ಶಿಕ್ಷಣ ನೀಡಿದ ಮಾತ್ರಕ್ಕೆ ಅವರು ಸರ್ಕಾರದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ವಾದವೂ ಇದೆ.

ಸಮಾಜದ ಕಡು ಬಡವರನ್ನೂ ಬಿಡದೇ ತೆರಿಗೆ ವಸೂಲಿ ಮಾಡಿದ ಹಣದಿಂದ ಸರ್ಕಾರ ಸಬ್ಸಿಡಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡಿರುತ್ತದೆ. ಹೀಗಾಗಿ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮಾಜವೇ ಮುಖ್ಯ ಎಂಬ ಸಮಾಜವಾದವೂ ಇದೆ.

ಕೊರೊನಾದ ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಯ ಮೌಲ್ಯ ಎಲ್ಲರಿಗೂ ತಿಳಿದಿದೆ. ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ವೈದ್ಯರ ಕೊರತೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ. ದೇಶದಲ್ಲಿ ಪ್ರತಿ ಹತ್ತು ಸಾವಿರ ಜನರಿಗೆ ಒಬ್ಬ ವೈದ್ಯರು ಮಾತ್ರ ಇದ್ದಾರೆ. ಆರೋಗ್ಯ ಕಾಪಾಡಲು ಪ್ರತಿ ಸಾವಿರಕ್ಕೆ ಒಬ್ಬ ವೈದ್ಯರ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ. 

ಇಂತಹ ಸಂದರ್ಭದಲ್ಲಿ ಹರಿಯಾಣ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣದ ಹೊಸ ಹಾದಿಗೆ ಕಾರಣವಾಗಲಿದೆಯೇ  ಅಥವಾ ರಾಜ್ಯ ಸರ್ಕಾರವೇ ಹಳೆಯ ಹಾದಿಗೆ ಮರಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.


ಎಸ್.ಎ. ಶ್ರೀನಿವಾಸ್‌
srinivas.sa@gmail.com