ಮುನ್ನುಡಿ…

ಮುನ್ನುಡಿ…

ನಾನು ನೀನು
ನೀನು ನಾನು
ನಡುವೆ ಅಡ್ಡ
ದೊಡ್ಡ ಗೋಡೆ.

ನಿಜದ ಪ್ರೀತಿ
ಭಾವ ಸ್ಫೂರ್ತಿ
ಕುಣಿವ ತಾಳವು
ಸಿಹಿ ನುಡಿ.

ನೋವು ನಲಿವು
ಇಷ್ಟ ಕಷ್ಟ
ಮನಕೆ ಹಿಡಿದ
ಹರಳ  ಕನ್ನಡಿ.

ಅಲ್ಲ ನಾವು
ಗೆಳೆಯ ಗೆಳತಿ
ಬರುವ ನಾಳೆಯ
ಬಾಳ ಮುನ್ನುಡಿ.


ಡಾ.ಶಶಿಕಾಂತ.ಪಟ್ಟಣ ರಾಮದುರ್ಗ.
dr.shashikant.pattan@gmail.com